ಮಂಗಳೂರು ಬಂದರಿನಲ್ಲಿ ಮೀನುಗಾರಿಕಾ ಬೋಟ್ ದುರಂತ | ಇಬ್ಬರು ಮೃತ್ಯು, ಏಳು ಜನರಿಗಾಗಿ ಶೋಧ

Prasthutha|

ಮಂಗಳೂರು : ಕೇರಳದಿಂದ ಮೀನುಗಾರಿಕೆ ನಡೆಸುತ್ತಾ ಬಂದ ಮೀನುಗಾರಿಕಾ ಬೋಟೊಂದು ಮಂಗಳೂರು ಸಮೀಪ ದುರಂತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

14 ಮೀನುಗಾರರು ಇದ್ದ ಈ ಬೋಟು ನವ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ದುರಂತಕ್ಕೀಡಾಗಿದೆ ಎನ್ನಲಾಗಿದೆ. ಏಳು ಜನರು ನಾಪತ್ತೆಯಾಗಿದ್ದು, ಐವರನ್ನು ರಕ್ಷಿಸಲಾಗಿದೆ. ಕಣ್ಮರೆಯಾಗಿರುವ ಮೀನುಗಾರರಿಗಾಗಿ ಸಮುದ್ರದಲ್ಲಿ ಶೋಧ ಮುಂದುವರಿದಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗು ಮತ್ತು ಏರ್​ಕ್ರಾಫ್ಟ್ ಮೂಲಕ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ತಿಳಿಸಿದೆ.

- Advertisement -

ದುರಂತಕ್ಕೊಳಗಾದ ಏಳು ಮಂದಿ ಮೀನುಗಾರರು ತಮಿಳುನಾಡು ಮೂಲದವರು ಮತ್ತೆ ಏಳು ಮಂದಿ ಒಡಿಶಾ ಮತ್ತು ಬಂಗಾಳದವರು ಎಂದು ತಿಳಿದು ಬಂದಿದೆ. ಈ ಬೋಟ್ ಕೇರಳದ ಬೇಪೂರ್ ಮೂಲದ ಜಾಫರ್ ಎಂಬವರ ಒಡೆತನದಲ್ಲಿದೆ.

- Advertisement -