Home ಟಾಪ್ ಸುದ್ದಿಗಳು ದೆಹಲಿ ಗಲಭೆ ಪ್ರಕರಣ: ಇದೇ ಮೊದಲ ಬಾರಿಗೆ ಆರೋಪಿಯೊಬ್ಬನನ್ನು ದೋಷಿ ಎಂದು ಪರಿಗಣಿಸಿದ ದೆಹಲಿ ನ್ಯಾಯಾಲಯ

ದೆಹಲಿ ಗಲಭೆ ಪ್ರಕರಣ: ಇದೇ ಮೊದಲ ಬಾರಿಗೆ ಆರೋಪಿಯೊಬ್ಬನನ್ನು ದೋಷಿ ಎಂದು ಪರಿಗಣಿಸಿದ ದೆಹಲಿ ನ್ಯಾಯಾಲಯ

► ಗಲಭೆಕೋರರ ಗುಂಪಿನಲ್ಲಿದ್ದ ಆರೋಪಿ ದಿನೇಶ್ ಯಾದವ್ ತಪ್ಪಿತಸ್ಥ

ನವದೆಹಲಿ: 2020ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಆರೋಪಿಯೊಬ್ಬನನ್ನು ದೋಷಿ ಎಂದು ದೆಹಲಿಯ ನ್ಯಾಯಾಲಯ ಪರಿಗಣಿಸಿದೆ. ಗುಂಪಿನಲ್ಲಿದ್ದು ಧ್ವಂಸ ಲೂಟಿ ಬೆಂಕಿ ಹಚ್ಚಿಲ್ಲ ಎಂದ ಮಾತ್ರಕ್ಕೆ ಆರೋಪಿ ಕೇವಲ ನೋಡುಗ ಎಂದರ್ಥವಲ್ಲ ಎಂದು ನ್ಯಾಯಾಲಯ ತೀರ್ಪಿನ ವೇಳೆ ತಿಳಿಸಿದೆ.


ಆರೋಪಿ ಹಿಂದೂ ಸಮುದಾಯಕ್ಕೆ ಸೇರಿದ್ದು ಮುಸ್ಲಿಮರ ವಿರುದ್ದ ಹಿಂಸಾಚಾರದಲ್ಲಿ ತೊಡಗಿದ್ದ ಗಲಭೆಯ ಗುಂಪಿನಲ್ಲಿದ್ದ. ಅಕ್ರಮ ಗುಂಪುಗೂಡುವಿಕೆಯ ಸಾಮಾನ್ಯ ಉದ್ದೇಶ ಆತನಿಗೆ ಇತ್ತು ಎಂದು ನ್ಯಾಯಾಲಯ ಹೇಳಿದೆ.


ಆರೋಪಿ ಅಕ್ರಮ ಗುಂಪುಗೂಡುವಿಕೆಯಿಂದ ದೂರ ಇದ್ದ ಮತ್ತು ಗುಂಪಿನೊಂದಿಗೆ ಯಾವುದೇ ಸಾಮಾನ್ಯ ಉದ್ದೇಶ ಹಂಚಿಕೊಂಡಿಲ್ಲ ಎಂಬುದಕ್ಕೆ ಯಾವುದೇ ದಾಖಲೆಗಳು ಇಲ್ಲ. ಆರೋಪಿ ದಿನೇಶ್ಯಾದವ್ ತಾವು ಗಲಭೆಕೋರರ ಗುಂಪಿನಲ್ಲಿದ್ದುದಾಗಿ ಹೇಳಿಕೆ ನೀಡಿದ್ದಾರೆ. ನಿಸ್ಸಂಶಯವಾಗಿ ಅವರು ಕೂಡ ಗುಂಪಿನ ಸಾಮಾನ್ಯ ಉದ್ದೇಶ ಹಂಚಿಕೊಂಡಿದ್ದರು ಎನ್ನಲು ಇಷ್ಟು ಅಂಶ ಸಾಕು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವೀರೇಂದರ್ ಭಟ್ ತಿಳಿಸಿದ್ದಾರೆ. ಡಿಸೆಂಬರ್ 12 ರಂದು ಶಿಕ್ಷೆಯ ಪ್ರಮಾಣದ ಬಗ್ಗೆ ವಾದಗಳನ್ನು ಆಲಿಸಲಾಗುವುದು.


(ಕೃಪೆ: ಬಾರ್ & ಬೆಂಚ್)

Join Whatsapp
Exit mobile version