Home ಟಾಪ್ ಸುದ್ದಿಗಳು ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ: ರಾಹುಲ್ ಗಾಂಧಿ

ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ: ರಾಹುಲ್ ಗಾಂಧಿ

►ಜನಾದೇಶ ಪ್ರಧಾನಿ ನರೇಂದ್ರ ಮೋದಿ ವಿರುದ್ಧವಾಗಿದೆ ಎಂದ ಖರ್ಗೆ


ನವದೆಹಲಿ: ಜನಾದೇಶ ಪ್ರಧಾನಿ ನರೇಂದ್ರ ಮೋದಿ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.


ಲೋಕಸಭಾ ಚುನಾವಣಾ ಫಲಿತಾಂಶದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತಾನಾಡಿದ ಅವರು, ಇದು ನರೇಂದ್ರ ಮೋದಿ ಅವರ ನೈತಿಕ ಸೋಲು. ಜನಾದೇಶ ಪ್ರಧಾನಿ ಮೋದಿ ವಿರುದ್ಧವಾಗಿದೆ. ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿಲ್ಲ” ಎಂದು ಹೇಳಿದರು.


ನ್ಯಾಯಾಂಗ ಸೇರಿದಂತೆ ದೇಶದ ಸಂಸ್ಥೆಗಳನ್ನು ವಶಪಡಿಸಿಕೊಂಡಿರುವ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಹೋರಾಡಿವೆ ಎಂದು ರಾಹುಲ್ ಗಾಂಧಿ ಹೇಳಿದರು.


ನಾವು ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಾತ್ರವಲ್ಲ, ಸಂಸ್ಥೆಗಳು, ದೇಶದ ಆಡಳಿತ ರಚನೆ, ಗುಪ್ತಚರ ಸಂಸ್ಥೆಗಳು, ಸಿಬಿಐ ಮತ್ತು ಇಡಿಐ, ನ್ಯಾಯಾಂಗದ ವಿರುದ್ಧವೂ ಹೋರಾಡಿದ್ದೇವೆ, ಏಕೆಂದರೆ ಈ ಎಲ್ಲಾ ಸಂಸ್ಥೆಗಳನ್ನು ಅಮಿತ್ ಶಾ ಮತ್ತು ನರೇಂದ್ರ ಮೋದಿ ಜಿ ವಶಪಡಿಸಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.


ಸಂವಿಧಾನವನ್ನು ಉಳಿಸಲು ಹೋರಾಟ ನಡೆಯಿತು. ಮೈತ್ರಿ ಪಾಲುದಾರರಿಗೆ ಧನ್ಯವಾದಗಳು. ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ನೀವು ಮೊದಲ ಹೆಜ್ಜೆ ಇಟ್ಟಿದ್ದೀರಿ ಎಂದು ಅವರು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಿಸಲು ಮುಂದಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಪ್ರತಿಪಕ್ಷಗಳ ಮೈತ್ರಿ ನಾಯಕರ ಸಭೆ ಇದ್ದು, ಅದರ ನಂತರ ಮುಂದಿನ ಕ್ರಮವನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.


ರಾಯ್ ಬರೇಲಿ ಮತ್ತು ವಯನಾಡ್ ಎರಡರಿಂದಲೂ ಜಯಗಳಿಸಿದ ನಂತರ ನೀವು ಯಾವ ಸ್ಥಾನವನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಿದಾಗ, ಅವರು ಎರಡೂ ಕ್ಷೇತ್ರಗಳ ಜನರಿಗೆ ಧನ್ಯವಾದ ಅರ್ಪಿಸಿದರು ಮತ್ತು ಜನರೊಂದಿಗೆ ಚರ್ಚಿಸಿ ನಂತರ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

Join Whatsapp
Exit mobile version