Home ಟಾಪ್ ಸುದ್ದಿಗಳು ಇಂದು ರಾಜ್ಯದಲ್ಲಿ ಮೊದಲನೇ ಹಂತದ ಮತದಾನ: ಬಿರುಸಿನ ಸ್ಪರ್ಧೆ ನೀಡಲಿರುವ 28 ಅಭ್ಯರ್ಥಿಗಳು

ಇಂದು ರಾಜ್ಯದಲ್ಲಿ ಮೊದಲನೇ ಹಂತದ ಮತದಾನ: ಬಿರುಸಿನ ಸ್ಪರ್ಧೆ ನೀಡಲಿರುವ 28 ಅಭ್ಯರ್ಥಿಗಳು

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಇಂದು ಮತದಾನ ನಡೆಯುತ್ತಿದೆ.

14 ಕ್ಷೇತ್ರಗಳಲ್ಲಿ ಒಟ್ಟು 2 ಕೋಟಿ 88 ಲಕ್ಷದ 19 ಸಾವಿರದ 342 ಮತದಾರರಿದ್ದು, ಇದರಲ್ಲಿ 1 ಕೋಟಿ 44 ಲಕ್ಷದ 28 ಸಾವಿರದ 99 ಪುರುಷ ಮತದಾರರು. 1 ಕೋಟಿ 43 ಲಕ್ಷದ 88 ಸಾವಿರದ 176 ಮಹಿಳಾ ಮತದಾರರು. 3,067 ತೃತೀಯಲಿಂಗಿಗಳು ಇದ್ದಾರೆ. 30 ಸಾವಿರದ 602 ಮತಗಟ್ಟೆ ತೆರೆಯಲಾಗಿದ್ದು, 4 ಲಕ್ಷ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, 5,000 ಮೈಕ್ರೋ ಅಬ್ಸರ್ವರ್‌ಗಳ ನೇಮಕ ಮಾಡಲಾಗಿದ್ದು, 50,000 ಸಿವಿಲ್ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 65 ಅರೆಸೇನಾ ಪಡೆ ತುಕಡಿ ಹಾಗೂ ಸಶಸ್ತ್ರ ಪೊಲೀಸ್ ಪಡೆಯೂ ಕಣ್ಗಾವಲು ಇರಿಸಲಿದೆ.

ಇಂದು ಬಿರುಸಿನ ಸ್ಪರ್ಧೆ ನಡೆಯಲಿರುವ ಅಭ್ಯರ್ಥಿಗಳು

ಉಡುಪಿ: ಚಿಕ್ಕಮಗಳೂರು ಕೋಟಾ ಶ್ರೀನಿವಾಸ ಪೂಜಾರಿ- ಜಯಪ್ರಕಾಶ್ ಹೆಗ್ಡೆ
ಹಾಸನ : ಪ್ರಜ್ವಲ್ ರೇವಣ್ಣ -ಶ್ರೇಯಸ್ ಪಟೇಲ್
ದಕ್ಷಿಣ ಕನ್ನಡ : ಕ್ಯಾ. ಬ್ರಿಜೇಶ್ ಚೌಟ- ಪದ್ಮರಾಜ್ ಆರ್
ಚಿತ್ರದುರ್ಗ: ಗೋವಿಂದ ಕಾರಜೋಳ- ಬಿಎನ್​ ಚಂದ್ರಪ್ಪ
ತುಮಕೂರು: ವಿ ಸೋಮಣ್ಣ- ಮುದ್ದಹನುಮೇಗೌಡ
ಮಂಡ್ಯ: ಎಚ್​ಡಿ ಕುಮಾರಸ್ವಾಮಿ- ವೆಂಕಟರಮಣೇಗೌಡ (ಸ್ಟಾರ್ ಚಂದ್ರು)
ಮೈಸೂರು: ಯದುವೀರ್ ಒಡೆಯರ್- ಎಂ ಲಕ್ಷ್ಮಣ್
ಚಾಮರಾಜನಗರ: ಸುಭಾಷ್ ಭೋಸ್- ಎಸ್ ಬಾಲರಾಜ್
ಬೆಂಗಳೂರು ಗ್ರಾಮಾಂತರ: ಡಾ ಸಿಎನ್ ಮಂಜುನಾಥ್- ಡಿಕೆ ಸುರೇಶ್
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ- ಸೌಮ್ಯಾ ರೆಡ್ಡಿ
ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ – ಪ್ರೊ. ರಾಜೀವ್ ಗೌಡ
ಬೆಂಗಳೂರು ಕೇಂದ್ರ: ಪಿಸಿ ಮೋಹನ್- ಮನ್ಸೂರ್ ಅಲಿ ಖಾನ್
ಚಿಕ್ಕಬಳ್ಳಾಪುರ: ಡಾ ಕೆ ಸುಧಾಕರ್- ರಕ್ಷಾ ರಾಮಯ್ಯ
ಕೋಲಾರ: ಮಲ್ಲೇಶ್ ಬಾಬು- ಕೆವಿ ಗೌತಮ್

Join Whatsapp
Exit mobile version