ಚಿಕ್ಕಮಗಳೂರು: ನೂತನವಾಗಿ ಆಯ್ಕೆಯಾಗಿರುವ ಚಿಕ್ಕಮಗಳೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಪ್ರಥಮ ಸಭೆಯು ಜಿಲ್ಲಾ ಅಧ್ಯಕ್ಷ ಅಲ್ ಹಾಜ್ ಮುಹಮ್ಮದ್ ಶಾಹಿದ್ ರಝ್ವಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಪ್ರಮುಖವಾಗಿ ಜಿಲ್ಲೆಯಲ್ಲಿರುವ ವಕ್ಫ್ ಅಧೀನ ಸಂಸ್ಥೆಗಳಲ್ಲಿ ವಕ್ಫ್ ಆಸ್ತಿಗಳ ಕಬಳಿಕೆಯಾಗಿದ್ದಲ್ಲಿ ಅಂತಹ ಆಸ್ತಿಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರತಿಯೊಬ್ಬ ಸದಸ್ಯರು ಕ್ರಮ ಕೈಗೊಳ್ಳುವಲ್ಲಿ ಶ್ರಮ ವಹಿಸುವ ಮೂಲಕ ವಕ್ಫ್ ಆಸ್ತಿಗಳನ್ನು ರಕ್ಷಣೆ ಮಾಡುವಲ್ಲಿ ಮುಂದಾಳತ್ವ ವಹಿಸಬೇಕೆಂದು ಸೂಚಿಸಲಾಯಿತು.
ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಆಯಾ ಸಂಸ್ಥೆಗಳ ಅಭಿವೃದ್ಧಿಗಾಗಿ ಶ್ರಮ ವಹಿಸಬೇಕಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಸಂಸ್ಥೆಗಳ ಆಡಳಿತ ಸಮಿತಿಗಳನ್ನು ರಚಿಸುವ ಸಂಬಂಧ ಇನ್ನಿತರ ಸಮಸ್ಯೆಗಳು ನನೆಗುದಿಗೆ ಬಿದ್ದಿರುವುದನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥ ಪಡಿಸಲಾಗುವುದು. ಜಿಲ್ಲೆಯಾದ್ಯಂತ ವಕ್ಫ್ ಸಂಸ್ಥೆಗಳಲ್ಲಿ ಅವ್ಯವಹಾರ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಜಿಲ್ಲೆಗೆ ಅತಿ ಮುಖ್ಯವಾಗಿ ವಕ್ಫ್ ಭವನ ನಿರ್ಮಿಸಲು ರಾಜ್ಯ ಮಂಡಳಿಗೆ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು.
ವಕ್ಫ್ ಮಂಡಳಿಯ ಅಧೀನದಲ್ಲಿರುವ ಸಂಸ್ಥೆಗಳ ಆಡಳಿತ ಸಮಿತಿಯ ಪದಾಧಿಕಾರಿಗಳು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕ್ರಮ ವಹಿಸುವಂತೆ ಚರ್ಚಿಸಲಾಯಿತು. ಜಿಲ್ಲೆಯಲ್ಲಿರುವ ದರ್ಗಾಗಳಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲಾಗುವ ಕಾಣಿಕೆ ಹಣದ ಹುಂಡಿ ಡಬ್ಬಗಳನ್ನು ತೆರೆಯುವ 8 ದಿನಗಳ ಮುನ್ನ ಆಯಾ ಆಡಳಿತ ಸಮಿತಿಯವರು ಜಿಲ್ಲಾ ವಕ್ಫ್ ಬೋರ್ಡ್ ಗೆ ಮಾಹಿತಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ವಕ್ಫ್ ಬೋರ್ಡ್ ನಿಂದ ಪ್ರತ್ಯೇಕವಾಗಿ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ಆದೇಶವನ್ನು ದರ್ಗಾ ಸಂಸ್ಥೆಗಳ ಪ್ರತಿಯೊಂದು ಆಡಳಿತ ಸಮಿತಿಯವರು ಪಾಲನೆ ಮಾಡಬೇಕು ಮತ್ತು ವಕ್ಫ್ ಬೋರ್ಡ್ ನೊಂದಿಗೆ ಸಹಕರಿಸಲು ಸೂಚಿಸಲಾಯಿತು.
ಸಮುದಾಯದವರ ಕುಂದು ಕೊರತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಶೇಷವಾಗಿ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಸಮುದಾಯದ ಏಳಿಗೆಗಾಗಿ ಬಡ ಕುಟುಂಬದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ನೀಡುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಇಮಾಮ್, ಮೌಜಿನ್ ರವರಿಗೆ ವಕ್ಫ್ ಬೋರ್ಡ್ ನಿಂದ ಮಾಸಿಕ ಸಹಾಯಧನ ನೀಡುತ್ತಿದ್ದು, ಸಂಬಂಧಪಟ್ಟವರು ತಮ್ಮ ದಾಖಲಾತಿ ಯೊಂದಿಗೆ ಜಿಲ್ಲಾ ವಕ್ಫ್ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಿ ಸಹಾಯಧನ ಪಡೆಯಬೇಕು ಹಾಗು ನಿವೃತ್ತ ಇಮಾಮ್ ಮೌಝಿನ್ ಗಳಿಗೆ ನಿವೃತ್ತಿ ವೇತನ ಯೋಜನೆ ಇದ್ದು ಫಲಾನುಭವಿಗಳು ಇದರ ಸದೂಪಯೋಗ ಪಡೆದುಕೊಳ್ಳಬಹುದು ತಾಲ್ಲೂಕುವಾರು ಸದಸ್ಯರಿಗೆ ಆಯಾ ತಾಲೂಕುಗಳಿಗೆ ಉಸ್ತುವಾರಿಯನ್ನು ಜವಾಬ್ದಾರಿ ನೀಡಲು ಚರ್ಚಿಸಲಾಯಿತು.
ಈ ಸಭೆಯಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕುವಾರು ಸದಸ್ಯರಾದ ಮೌಲಾನ ಸಾದಿಕ್, ಆಫ್ರೋಜ್, ಫಾರೂಕ್ ಸಲೀಂ, ಯೂಸುಫ್ ಹಾಜಿ, ಸಲೀಂ, ಸಿದ್ದೀಕ್, ಫಸಿಉರ್ರಹ್ಮಾನ್ , ಮನ್ಸೂರ್, ನಾಸಿರ್, ಅಬೂಬಕ್ಕರ್, ಅಬುತಲ್ಹಾ ಇನ್ನಿತರೆ ಸದಸ್ಯರು ಮತ್ತು ಉಪಾಧ್ಯಕ್ಷರುಗಳಾದ ಅಡ್ವೊಕೇಟ್ ಇರ್ಫಾನ್, ಮುಹಮ್ಮದ್ ರಫಿ, ಮತ್ತು ಜಿಲ್ಲಾ ವಕ್ಫ್ ಅಧಿಕಾರಿಗಳಾದ ನೂರ್ ಪಾಷಾ ಹಾಜರಿದ್ದರು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಆಲ್ ಹಾಜ್ ಫೈರೋಜ್ ಅಹಮದ್ ರಝ್ವಿ ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ