ಫಾರ್ಮುಲಾ 2 ರೇಸ್ ನಲ್ಲಿ ಪ್ರಪ್ರಥಮ ಭಾರತೀಯನ ಜಯ | ಇತಿಹಾಸ ಸೃಷ್ಟಿಸಿದ ಜಿಹಾನ್ ದಾರುವಾಲ

Prasthutha|

ನವದೆಹಲಿ : ಫಾರ್ಮುಲಾ ರೇಸ್ 2ರಲ್ಲಿ ಪ್ರಪ್ರಥಮ ಬಾರಿಗೆ ಭಾರತೀಯರೊಬ್ಬರು ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಭಾರತದ ಜಿಹಾನ್ ದಾರುವಾಲ ಅವರು ಫಾರ್ಮುಲಾ 2 ರೇಸ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಗೆಲುವು ಸಾಧಿಸುವ ಮೂಲಕ ಫಾರ್ಮುಲಾ 2 ರೇಸ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಜಿಹಾನ್ ಪಾತ್ರರಾಗಿದ್ದಾರೆ.

- Advertisement -

ಬಹ್ರೇನ್ ನಲ್ಲಿ ನಡೆದ ಸಖ್ಹಿರ್ ಗ್ರಾಂಡ್ ಪ್ರಿಕ್ಸ್ ಎಫ್ 2 ರೇಸ್ ನಲ್ಲಿ 22 ವರ್ಷದ ಜಿಹಾನ್ ವಿಜೇತರಾಗಿದ್ದಾರೆ. ಈ ರೇಸ್ ನಲ್ಲಿ ಜಿಹಾನ್ ಅವರು ಎಫ್ 2 ಚಾಂಪಿಯನ್ ಗಳಾದ ಮೈಕ್ ಶೂಮೇಕರ್ ಮತ್ತು ಡೇನಿಯಲ್ ಟಿಕ್ಟಮ್ ಅವರನ್ನೇ ಹಿಂದಿಕ್ಕಿ ದಾಖಲೆ ಬರೆದಿದ್ದಾರೆ.

- Advertisement -