ದೇಶದಲ್ಲೇ ಮೊದಲು: ಕುಮಟಾದಲ್ಲಿ ಸಾರ್ವಜನಿಕರಿಗಾಗಿ ವೈಫೈ-7 ಸೇವೆ ಪ್ರಾರಂಭ 

Prasthutha|

ಉತ್ತರಕನ್ನಡ: ಪ್ರವಾಸೋದ್ಯಮವನ್ನು ಉತ್ತೇಜಿಸಲು ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ವೈಫೈ-7 ಸೇವೆಯನ್ನು ಕುಮಟಾದ ಯಾಣದಲ್ಲಿ ಪ್ರಾರಂಭ ಮಾಡಲಾಗಿದೆ.

- Advertisement -

ಇನ್ಮುಂದೆ ಇಲ್ಲಿನ ದಟ್ಟ ಕಾಡಿನ ಒಳಗಿರುವ ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಹೈ ಸ್ಪೀಟ್ ಇಂಟರ್‌ನೆಟ್ ಸೇವೆ ದೊರೆಯಲಿದೆ. ಬಿಎಸ್‌ಎನ್‌ಎಲ್ ಹಾಗೂ ಜಿಎನ್‌ಎ ಕಂಪೆನಿ ಸಹಯೋಗದಲ್ಲಿ ಭಾರತ್ ಏರ್‌ ಫೈ ನೂತನ ಸಂಪರ್ಕ ಸೇವೆ ಆರಂಭಿಸಿದೆ.

ಜಪಾನೀಸ್ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗಾಗಿ ವೈಫೈ ಸೇವೆ ಒದಗಿಸಲಾಗುತ್ತಿದೆ. ಶ್ರೀ ಗಂಗಾ, ಚಂಡಿಕಾ, ಭೈರವೇಶ್ವರ ದೇವರ ದರ್ಶನ, ಪ್ರಪಂಚದ ಅದ್ಭುತ ಯಾಣ ಗುಹೆ, ಪ್ರಕೃತಿ ಸೌಂದರ್ಯ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಸಾಧ್ಯವಾಗಲಿದೆ. ಕ್ಯೂಆರ್ ಕೋಡ್ ಮೂಲಕ ಪ್ಯಾಕೇಜ್ ಖರೀದಿಸಿ ವೈಫೈ ಸೇವೆ ಬಳಸಲು ವ್ಯವಸ್ಥೆ ಮಾಡಲಾಗಿದೆ.

- Advertisement -

35 ನಿಮಿಷ, 65 ನಿಮಿಷ ಹಾಗೂ ಒಂದು ಪೂರ್ಣ ದಿನದ ವೈಫೈ ಸೇವೆಯನ್ನು ವಿವಿಧ ದರದಲ್ಲಿ ಕೇವಲ 100ರೂ. ಒಳಗೆ ಪಡೆಯಲು ಅವಕಾಶ ನೀಡಲಾಗಿದೆ. ಪ್ರವಾಸಿಗರಿಗೆ ಕ್ಷೇತ್ರದಿಂದ ಒಂದು ಕಿ.ಮೀ. ರೇಂಜ್ ವ್ಯಾಪ್ತಿಯವರೆಗೆ ಉತ್ತಮ ವೈಫೈ ಸೇವೆ ದೊರೆಯಲಿದೆ.



Join Whatsapp