Home ಟಾಪ್ ಸುದ್ದಿಗಳು ತಮಿಳುನಾಡಿನ ಮತ್ತೊಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ | 5 ಸಾವು; 14 ಮಂದಿಗೆ ಗಾಯ

ತಮಿಳುನಾಡಿನ ಮತ್ತೊಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ | 5 ಸಾವು; 14 ಮಂದಿಗೆ ಗಾಯ

ಚೆನ್ನೈ : ತಮಿಳುನಾಡಿನ ವಿರುಧುನಗರದ ಮತ್ತೊಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಐವರು ಮೃತಪಟ್ಟಿದ್ದಾರೆ. ಮೃತರಲ್ಲಿ ಓರ್ವ ಪುರುಷ ಮತ್ತು ನಾಲ್ವರು ಮಹಿಳೆಯರು ಎಂದು ತಿಳಿದುಬಂದಿದೆ. ಇನ್ನೂ 14 ಮಂದಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ಶಿವಕಾಶಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ಜಿಲ್ಲೆಯಲ್ಲಿ ಎರಡು ವಾರಗಳ ಹಿಂದೆಯಷ್ಟೇ ಸ್ಫೋಟ ಸಂಭವಿಸಿ, 23 ಮಂದಿ ಸಾವಿಗೀಡಾಗಿದ್ದರು.

ಕಾರ್ಮಿಕರು ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದ ವೇಳೆಯೇ ಸ್ಫೋಟ ಸಂಭವಿಸಿದೆ. ರಾಸಾಯನಿಕಗಳ ಘರ್ಷಣೆಯಿಂದ ಸ್ಫೋಟ ಸಂಭವಿಸಿದೆ. ಪ್ರದೇಶದ ಇನ್ನೂ 13 ಶೆಡ್ ಗಳಿಗೆ ಬೆಂಕಿ ಹರಡಿದೆ. ಶಿವಕಾಶಿ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿ, ಬೆಂಕಿ ನಂದಿಸಿದ್ದಾರೆ ಮತ್ತು ಜನರನ್ನು ರಕ್ಷಿಸಿದ್ದಾರೆ.  

Join Whatsapp
Exit mobile version