Home ಟಾಪ್ ಸುದ್ದಿಗಳು ದೀಪಾವಳಿ ಸಂಭ್ರಮದ ನಡುವೆ ಬಟ್ಟೆ ಅಂಗಡಿಗೆ ಬೆಂಕಿ | ಇಬ್ಬರು ಅಗ್ನಿಶಾಮಕ ಸಿಬ್ಬಂದಿಯೇ ಸಜೀವ ದಹನ

ದೀಪಾವಳಿ ಸಂಭ್ರಮದ ನಡುವೆ ಬಟ್ಟೆ ಅಂಗಡಿಗೆ ಬೆಂಕಿ | ಇಬ್ಬರು ಅಗ್ನಿಶಾಮಕ ಸಿಬ್ಬಂದಿಯೇ ಸಜೀವ ದಹನ

ಮದುರೈ: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ತಮಿಳುನಾಡಿನ ಮದುರೈನಲ್ಲಿ ಬಟ್ಟೆ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಭಾರೀ ದುರಂತ ಸಂಭವಿಸಿದೆ. ಘಟನೆಯಲ್ಲಿ ಬೆಂಕಿ ನಂದಿಸಲು ಹೋದ ಅಗ್ನಿ ಶಾಮಕ ದಳದ ಇಬ್ಬರು ಸಿಬ್ಬಂದಿಯೇ ಸಜೀವ ದಹನಗೊಂಡಿದ್ದಾರೆ.

ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಹಠಾತ್ ಕಟ್ಟಡ ಕುಸಿದಿದೆ. ಕಟ್ಟಡದ ಕೆಳಗೆ ಸಿಲುಕಿದ ಇಬ್ಬರು ಸಿಬ್ಬಂದಿ ಸಜೀವವಾಗಿ ದಹಿಸಿ, ಮೃತಪಟ್ಟಿದ್ದಾರೆ.

ಸತತ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಂದಿಸಲಾಗಿದೆ.  

Join Whatsapp
Exit mobile version