Home ಟಾಪ್ ಸುದ್ದಿಗಳು ‘ಫೈರ್ ಹೇರ್ ಕಟ್’ ಅವಾಂತರ: ಹೊತ್ತಿ ಉರಿದ ತಲೆ

‘ಫೈರ್ ಹೇರ್ ಕಟ್’ ಅವಾಂತರ: ಹೊತ್ತಿ ಉರಿದ ತಲೆ

ಗಾಂಧಿ ನಗರ: ಕ್ಷೌರಿಕನು ಗ್ರಾಹಕರೊಬ್ಬರಿಗೆ ಫೈರ್ ಹೇರ್ ಕಟ್ ವಿನ್ಯಾಸವನ್ನು ಮಾಡಲು ಹೊಗಿ ತಲೆಗೆ ಬೆಂಕಿ ತಗುಲಿದ ಘಟನೆ ಗುಜರಾತಿನ ವಲಸಾಡ್ ಜಿಲ್ಲೆಯ ವಾಪಿ ನಗರದ ಸಲೂನ್ ಒಂದರಲ್ಲಿ ನಡೆದಿದೆ.


ಕೂದಲಿಗೆ ಬೆಂಕಿ ಹಚ್ಚಿದ ಕೂಡಲೇ, ಯುವಕನ ತಲೆ, ಎದೆ, ಕುತ್ತಿಗೆಗೆ ತೀವ್ರವಾಗಿ ಸುಟ್ಟು ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಹೇರ್ ಕಟ್ ಪ್ರಯೋಗ ಮಾಡುತ್ತಿದ್ದಾಗ ಸಲೂನಿನಲ್ಲಿ ಯಾರೆಲ್ಲ ಇದ್ದರೋ ಅವರೆಲ್ಲರ ಹೇಳಿಕೆಯನ್ನು ದಾಖಲಿಸಿದ ನಂತರವೇ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Join Whatsapp
Exit mobile version