Home ಟಾಪ್ ಸುದ್ದಿಗಳು ಅಧಿವೇಶನ ನಡೆಯುತ್ತಿರುವ ವೇಳೆ ಸಂಸತ್ತಿನಲ್ಲಿ ಅಗ್ನಿ ಅವಘಡ

ಅಧಿವೇಶನ ನಡೆಯುತ್ತಿರುವ ವೇಳೆ ಸಂಸತ್ತಿನಲ್ಲಿ ಅಗ್ನಿ ಅವಘಡ

ನವದೆಹಲಿ: ಚಳಿಗಾಲದ ಅಧಿವೇಶನ ನಡೆಯುತ್ತಿರುವ ವೇಳೆ ಸಂಸತ್ತಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ.


ಸಂಸತ್ತಿನ ಕೊಠಡಿ ಸಂಖ್ಯೆ 59ರಲ್ಲಿ ಬುಧವಾರ ಬೆಳಗ್ಗೆ 8 ಗಂಟಗೆ ಲಘು ಅಗ್ನಿ ಅವಘಡ ಸಂಭವಿಸಿದ್ದು, ಭವನದ ಪ್ರೆಸ್ ರೂಮ್ ಎದುರಿನ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.


ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ. ಕೊಠಡಿಯಲ್ಲಿನ ಕಂಪ್ಯೂಟರ್ ಸೆಟ್, ಕುರ್ಚಿ ಮತ್ತು ಟೇಬಲ್ ಗಳಿಗೆ ತಗುಲಿದ ಬೆಂಕಿಯನ್ನು ನಂದಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Join Whatsapp
Exit mobile version