Home ಟಾಪ್ ಸುದ್ದಿಗಳು ದೌಲತ್ ಪುರ – ಸಾಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ

ದೌಲತ್ ಪುರ – ಸಾಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ

ಜೈಪುರ: ಜೈಪುರದ ಖತಿಪುರ ನಿಲ್ದಾಣದ ಬಳಿ ಶುಕ್ರವಾರ ದೌಲತ್ಪುರ-ಸಾಬರಮತಿ ಎಕ್ಸ್ ಪ್ರೆಸ್ ರೈಲಿನ 3ನೇ ಎಸಿ ಕೋಚ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.


ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಒಂದು ಗಂಟೆ ತಡವಾಗಿ ರೈಲು ಹೊರಟಿದೆ ಎಂದು ವಾಯವ್ಯ ರೈಲ್ವೆ ವಕ್ತಾರ ಕ್ಯಾಪ್ಟನ್ ಶಶಿ ಕಿರಣ್ ತಿಳಿಸಿದ್ದಾರೆ.


ಶೌಚಾಲಯದ ಬಳಿ ಬೆಂಕಿ ಹೊತ್ತಿಕೊಂಡಿದೆ. ಪ್ರಯಾಣಿಕರೊಬ್ಬರು ತಕ್ಷಣ ಚೈನ್ ಎಳೆದರು. ಇತರ ಪ್ರಯಾಣಿಕರ ಸಹಾಯದಿಂದ ಕೋಚ್ ಅಟೆಂಡರ್ ಬೆಂಕಿಯನ್ನು ನಿಯಂತ್ರಿಸಿದರು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

Join Whatsapp
Exit mobile version