Home ಟಾಪ್ ಸುದ್ದಿಗಳು ಸೌಥ್ ಇಂಡಿಯನ್ ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಅವಘಡ: ಅಪಾರ ನಷ್ಟ

ಸೌಥ್ ಇಂಡಿಯನ್ ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಅವಘಡ: ಅಪಾರ ನಷ್ಟ

ಬೆಂಗಳೂರು: ಅರಕೆರೆ ಗೇಟ್ ಬಳಿಯ ಸೌಥ್ ಇಂಡಿಯನ್ ಶಾಪಿಂಗ್ ಮಾಲ್ ನಲ್ಲಿ ಇಂದು ನಸುಕಿನಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಗೃಹ ಬಳಕೆ ವಸ್ತುಗಳು ಸುಟ್ಟು ಭಸ್ಮವಾಗಿವೆ.

ವಾರಾಂತ್ಯದ ಕರ್ಪ್ಯೂ ಹಿನ್ನೆಲೆಯಲ್ಲಿ ರಾತ್ರಿ ಪಾಳಿಯ ಸಿಬ್ಬಂದಿಯು ಕೆಲಸಕ್ಕೆ ಬಾರದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸೌಥ್ ಇಂಡಿಯನ್ ಮಾಲ್ನ  ನೆಲ ಮಹಡಿಯಲ್ಲಿ ಮುಂಜಾನೆ 3ರ ಸುಮಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಮಾಲ್ ನಲ್ಲಿ ಯಾವ ಸಿಬ್ಬಂದಿ ಇರಲಿಲ್ಲ. ಇದರಿಂದಾಗಿ ಬೆಂಕಿ ಕಾಣಿಸಿಕೊಂಡರೂ ತಕ್ಷಣ ಯಾರಿಗೂ ತಿಳಿದಿರಲಿಲ್ಲ.

ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಮಾಲ್ನಿಂದ ಬೆಂಕಿ, ದಟ್ಟ ಹೊಗೆ ಬರುತ್ತಿರುವುದು ಕಂಡುಬಂದಿದೆ. ಅವರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮಾಲ್ನ ಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು, ಗೃಹಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿತ್ತು.

  10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಳಿಗ್ಗೆ 9ರವರೆಗೆ ಕಾರ್ಯಾಚರಣೆ ಬೆಂಕಿ ನಂದಿಸಿವೆ.

Join Whatsapp
Exit mobile version