Home ಟಾಪ್ ಸುದ್ದಿಗಳು ವೃದ್ಧಾಶ್ರಮದಲ್ಲಿ ಬೆಂಕಿ ಅವಘಢ: ಇಬ್ಬರು ಸಜೀವ ದಹನ

ವೃದ್ಧಾಶ್ರಮದಲ್ಲಿ ಬೆಂಕಿ ಅವಘಢ: ಇಬ್ಬರು ಸಜೀವ ದಹನ

ನವದೆಹಲಿ: ವೃದ್ಧಾಶ್ರಮದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಹಿರಿಜೀವಗಳೆರಡು ಸಜೀವ ದಹನವಾದ ದುರ್ಘಟನೆ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ನಡೆದಿದೆ.

ಬೆಳಿಗ್ಗೆ 5.14ರ ವೇಳೆಗೆ ಅಂಟಾರಾ ವೃದ್ಧಾಶ್ರಮದ 3ನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮಹಡಿಯಲ್ಲಿದ್ದ ಕೆಲವರು ಎಚ್ಚರಗೊಂಡು ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಆದರೆ, ಇಬ್ಬರು ಬೆಂಕಿಗೆ ದಹನವಾದರು. ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆಗಳು 2 ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಿದ್ದಾರೆ.

Join Whatsapp
Exit mobile version