ಟಿಂಬರ್ ಗೋಡೌನ್ ನಲ್ಲಿ ಅಗ್ನಿ ದುರಂತ: ಕನಿಷ್ಠ 11 ಮಂದಿ ಸಾವು

Prasthutha|

ಸಿಕಂದರಾಬಾದ್: ತೆಲಂಗಾಣದ ಸಿಕಂದರಾಬಾದ್ ನ ಟಿಂಬರ್ ಗೋಡೌನ್ ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ.

- Advertisement -

ಬೆಳಗಿನ ಜಾವ ಸಿಕಂದರಾಬಾದ್ ನ ಭೋಯಿಗುಡಾದ ಜನನಿಬಿಡ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬಿಹಾರದಿಂದ ಬಂದ 12 ವಲಸೆ ಕಾರ್ಮಿಕರು ಗೋಡೌನ್ ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಿಂದ ಜಿಗಿದು ಒಬ್ಬ ಕಾರ್ಮಿಕ ಬೆಂಕಿಯಿಂದ ಪಾರಾಗಿದ್ದು, 11 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಗೋಡೌನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬೆಂಕಿ ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

Join Whatsapp
Exit mobile version