Home ಟಾಪ್ ಸುದ್ದಿಗಳು ಉತ್ತರಪ್ರದೇಶದಲ್ಲಿ FIR: ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಪ್ರಿಯಾಂಕ್ ಖರ್ಗೆ

ಉತ್ತರಪ್ರದೇಶದಲ್ಲಿ FIR: ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸನಾತನ ಧರ್ಮ ಹೇಳಿಕೆ ವಿಚಾರವಾಗಿ ತಮಿಳುನಾಡು ಸಚಿವ ಉದಯನಿಧಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್ ಐಆರ್ ದಾಖಲಾಗಿದ್ದು, ಈ ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನೇ ಮಾಡಿದರೂ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲಾ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನನ್ನ ಹೇಳಿಕೆ ಅತ್ಯಂತ ಸ್ಪಷ್ಟವಾಗಿದೆ. ನಾನು ಯಾವುದೇ ಒಂದು ಧರ್ಮದ ವಿರುದ್ಧ ಹೇಳಿಕೆ ನೀಡಿಲ್ಲ ಎಂದರು.

ನಾನು ಅಂದು ಹೇಳಿದ್ದು, ಹಾಗೂ ಈಗಲು ಬದ್ಧವಾಗಿರುವ ನಿಲುವು. ‘ಯಾವ ಧರ್ಮವು ಮನುಷ್ಯರ ಮಧ್ಯೆ ಬೇಧ ಭಾವ ಮೂಡಿಸುತ್ತದೆಯೋ, ಯಾವ ಧರ್ಮ ಸಮಾನತೆಯನ್ನು ಸಾರುವುದಿಲ್ಲವೋ’  ಅದು ನನ್ನ ಪ್ರಕಾರ ಧರ್ಮವೇ ಅಲ್ಲ.ಅವರಿಗೆ ಅವರ ಧರ್ಮವು ಆ ರೀತಿಯಾಗಿ ಇದೆ ಎನಿಸಿದರೆ ಅದು ಅವರ ಧರ್ಮದ ಸಮಸ್ಯೆ. ನನ್ನ ಸಮಸ್ಯೆಯಲ್ಲ. ನನ್ನ ಧರ್ಮ ಸಂವಿಧಾನ ಮಾತ್ರ ಎಂದರು!

FIR ವಿಚಾರವಾಗಿ ಉತ್ತರ ಪ್ರದೇಶ ಸರ್ಕಾರ ಏನಾದರೂ ಮಾಡಿಕೊಳ್ಳಲಿ. ಕಾನೂನು ಪ್ರಕಿಯೆ ಕ್ರಮಬದ್ಧವಾಗಿ ನಡೆಯುತ್ತದೆ. ನಾವು ಸಂವಿಧಾನ ಬದ್ಧವಾಗಿ ಅದನ್ನು ಎದುರಿಸಲು ಮಾಡಬೇಕಾಗಿದ್ದೆಲ್ಲವನ್ನೂ ಮಾಡುತ್ತೇವೆ ಎಂದರು.

Join Whatsapp
Exit mobile version