Home ಟಾಪ್ ಸುದ್ದಿಗಳು ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ: ನಟಿ ಮೀರಾ ವಿರುದ್ಧ ಎಫ್ಐಆರ್

ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ: ನಟಿ ಮೀರಾ ವಿರುದ್ಧ ಎಫ್ಐಆರ್

ಚೆನ್ನೈ: ಚಿತ್ರರಂಗದಲ್ಲಿ ಆಗುತ್ತಿರುವ ಅನೇಕ ಅನಾಹುತಗಳಿಗೆ ಪರಿಶಿಷ್ಟ ಜಾತಿಯ ಜನರೇ ಕಾರಣ . ಅಂಥವರನ್ನು ಚಿತ್ರರಂಗದಿಂದ ತೊಲಗಿಸಬೇಕು ಎಂದು ಹೇಳಿಕೆ ನೀಡಿದ್ದ ತಮಿಳು ನಟಿ ಮೀರಾ ಮಿಥುನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.


ಮೀರಾ ಮಿಥುನ್ ಅವರ ಹೇಳಿಕೆಗಳಿಂದ ಆಕ್ರೋಶಗೊಂಡಿರುವ ಜನರು ಪೊಲೀಸರಿಗೆ ದೂರು ನೀಡಿದ್ದಾರೆ . ಚೆನ್ನೈ ಪೊಲೀಸರು ಮೀರಾ ಮಿಥುನ್ ವಿರುದ್ಧ ಎಸ್ ಸಿ ಎಸ್ ಟಿ ಕಾಯ್ದೆಯಡಿ ಹಾಗೂ ಐಪಿಸಿ ಸೆಕ್ಷನ್ ಗಳಡಿ ದೂರು ದಾಖಲಿಸಿಕೊಂಡಿದ್ದಾರೆ.
ಸಂಸತ್ ಸದಸ್ಯ ತೋಳ್ ತಿರುಮಾವಳವನ್ ನೇತೃತ್ವದ ರಾಜಕೀಯ ಪಕ್ಷವಾದ ವಿದುತಲೈ ಚಿರುತಗೈ ಕಚ್ಚಿ (ವಿಸಿಕೆ) ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.


‘ಅನೈತಿಕ ಚಟುವಟಿಕೆ ಮತ್ತು ಅಪರಾಧ ಕೃತ್ಯಗಳಲ್ಲಿ ಪರಿಶಿಷ್ಟ ಜಾತಿ ಜನರು ಪಾಲ್ಗೊಂಡಿರುವುದರಿಂದ ಅವರು ಸಮಸ್ಯೆ ಎದುರಿಸುತ್ತಾರೆ . ಚಿತ್ರರಂಗದಲ್ಲಿ ಆಗುತ್ತಿರುವ ಕೆಡುಕುಗಳಿಗೆ ಪರಿಶಿಷ್ಟ ಜಾತಿಯ ನಿರ್ದೇಶಕರು ಕಾರಣ. ಅಂಥವರನ್ನೆಲ್ಲ ಚಿತ್ರರಂಗದಿಂದ ತೊಲಗಿಸಲು ಇದು ಸರಿಯಾದ ಸಮಯ ಅಂತ ನನಗೆ ಅನಿಸುತ್ತದೆ ‘ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

Join Whatsapp
Exit mobile version