Home ಕರಾವಳಿ ಉಪ್ಪಿನಂಗಡಿ ಕಾಲೇಜಿಗೆ ಅಕ್ರಮ ಪ್ರವೇಶಿಸಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ; ಮೂವರು ಪತ್ರಕರ್ತರ ಮೇಲೆ FIR ದಾಖಲು

ಉಪ್ಪಿನಂಗಡಿ ಕಾಲೇಜಿಗೆ ಅಕ್ರಮ ಪ್ರವೇಶಿಸಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ; ಮೂವರು ಪತ್ರಕರ್ತರ ಮೇಲೆ FIR ದಾಖಲು

ಉಪ್ಪಿನಂಗಡಿ: ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿಗೆ ಅತಿಕ್ರಮ ಪ್ರವೇಶಿಸಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿ ಶಾಲು ಎಳೆದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪತ್ರಕರ್ತರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.


ನ್ಯೂಸ್ 18 ವರದಿಗಾರ ಅಜಿತ್ ಕುಮಾರ್ , ಪತ್ರಕರ್ತರಾದ ಪ್ರವೀಣ್ ಕುಮಾರ್ ಹಾಗೂ ಸಿದ್ದೀಕ್ ನೀರಾಜೆ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಜೂನ್ 2ರಂದು 9.30 ರ ಸುಮಾರಿಗೆ ಸಂತ್ರಸ್ತ ವಿದ್ಯಾರ್ಥಿನಿ ಕಾಲೇಜಿಗೆ ಬಂದಾಗ ಅಪರಿಚಿತ ಮೂವರು ವ್ಯಕ್ತಿಗಳು ಕಾಲೇಜಿಗೆ ಅತಿಕ್ರಮ ಪ್ರವೇಶಿಸಿದ್ದನ್ನು ನೋಡಿದ್ದಾಳೆ. ಈ ವೇಳೆ ಅಜಿತ್ ಕುಮಾರ್ ಎಂಬಾತ ವಿದ್ಯಾರ್ಥಿನಿಯ ಶಾಲನ್ನು ಎಳೆಯಲು ಪ್ರಯತ್ನಿಸಿದ್ದು ಆಕೆ ತಪ್ಪಿಸಿಕೊಂಡಾಗ ಪ್ರವೀಣ್ ಕುಮಾರ್ ಎಂಬಾತ ಪ್ರಚೋದನೆ ನೀಡಿದ್ದಾನೆ. ಈ ವೇಳೆ ಅಜಿತ್ ಕುಮಾರ್ ವಿದ್ಯಾರ್ಥಿನಿಯ ವಿಡಿಯೋ ಮಾಡಿದ್ದು ಇದನ್ನು ಪ್ರಶ್ನಿಸಿದಾಗ ‘ನಾಳೆಯಿಂದ ಹೇಗೆ ಕಾಲೇಜಿಗೆ ಬರುತ್ತೇವೆ ಎಂದು ನೋಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ಈ ಬಗ್ಗೆ ಮೌಖಿಕ ದೂರು ನೀಡಿದ್ದು ಪ್ರಾಂಶುಪಾಲರು ಮೂವರನ್ನು ಕರೆದು ಅವರು ತೆಗೆದ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ.

ಬಳಿಕ ಅವರೆಲ್ಲರೂ ಪತ್ರಕರ್ತರು ಎಂಬುದು ತಿಳಿಯಿತು ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾಳೆ.
ಪೊಲೀಸರು ಐಪಿಸಿ 447, 354, 504,606,34 ಸೆಕ್ಷನ್ ನಡಿ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Join Whatsapp
Exit mobile version