Home ಟಾಪ್ ಸುದ್ದಿಗಳು ನಕಲಿ ನಂದಿನಿ ತುಪ್ಪ ತಯಾರಿಸಿ ಮಾರಾಟ ಪ್ರಕರಣ: ನಾಲ್ವರ ವಿರುದ್ಧ ಎಫ್ ಐಆರ್

ನಕಲಿ ನಂದಿನಿ ತುಪ್ಪ ತಯಾರಿಸಿ ಮಾರಾಟ ಪ್ರಕರಣ: ನಾಲ್ವರ ವಿರುದ್ಧ ಎಫ್ ಐಆರ್

ಮೈಸೂರು: ನಕಲಿ ನಂದಿನಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಂ. ವಿಜಯ್ ಕುಮಾರ್ ದೂರಿನ ಮೇರೆಗೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದು, ತಮಿಳುನಾಡು ಮೂಲದ ಜೆ.ಪಿ.ನಗರದ ನಿವಾಸಿ ಮುರುಗೇಶ್, ಅಶ್ವಿನಿ, ರಾಯಚೂರು ಮೂಲದ ರಾಘವೇಂದ್ರ ನಗರದ ನಿವಾಸಿ ಎಲ್.ಕುಮಾರ್ ಮತ್ತು ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕವನ್ನು ಸ್ಥಳೀಯರ ನೆರವಿನಿಂದ ಮಾನವ ‌ಹಕ್ಕು ಸಂಘಟನೆ ಸದಸ್ಯರು ಹೊಸಹುಂಡಿ ಗ್ರಾಮದ ಹೊರವಲಯದಲ್ಲಿ ಗುರುವಾರ ದಾಳಿ ನಡೆಸಿ, ಅಕ್ರಮ ಬಯಲಿಗೆಳೆದಿದ್ದರು. ಅಲ್ಲದೇ ‌ಮೈಮುಲ್ ಹಾಗೂ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಪರಿಶೀಲನೆ ನಡೆಸಿ, ಕಲಬೆರಕೆ ಖಚಿತಪಡಿಸಿದ್ದರು. ಅಲ್ಲಿದ್ದ ಒಂದೂವರೆ ಟನ್ ​ನಷ್ಟು ಕಲಬೆರಕೆ ತುಪ್ಪ, 500 ಕೆಜಿ ವನಸ್ಪತಿ, 500 ಲೀಟರ್ ಪಾಮ್ ಆಯಿಲ್​​ನ್ನು ವಶಪಡಿಸಿಕೊಂಡು ಗೋಡೌನ್​ ಸೀಜ್ ಮಾಡಲಾಗಿತ್ತು.

Join Whatsapp
Exit mobile version