Home ಟಾಪ್ ಸುದ್ದಿಗಳು ವಧು ಹುಡುಕಿ ಕೊಡಿ: ಸರ್ಕಾರಕ್ಕೆ ಯುವಕರ ಮನವಿ

ವಧು ಹುಡುಕಿ ಕೊಡಿ: ಸರ್ಕಾರಕ್ಕೆ ಯುವಕರ ಮನವಿ

ಸೋಲಾಪುರ: ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಯುವಕರು ಮೆರವಣಿಗೆ ನಡೆಸಿ, ವಧುವನ್ನು ಹುಡುಕಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ ಘಟನೆ ಮಹಾರಾಷ್ಟ್ರದ ಸೋಲಾಪುರದಿಂದ ವರದಿಯಾಗಿದೆ.


‘ವಧು–ವರರ ಮೋರ್ಚಾ‘ ಎಂಬ ಸಂಘಟನೆಯ ಸದಸ್ಯರು ಬುಧವಾರ ಮದುವೆ ಉಡುಪು ಧರಿಸಿ ಮೆರವಣಿಗೆ ಮಾಡಿದರು. ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಮಹಾರಾಷ್ಟ್ರದಲ್ಲಿ ಗಂಡು –ಹೆಣ್ಣು ಅನುಪಾತ ಹೆಚ್ಚಿಸಲು ಪ್ರಸವಪೂರ್ವ ಜಾಗೃತಿ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಅಲ್ಲದೇ ಈ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ವಿವಾಹವಾಗಲು ವಧುವಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಮಹಾರಾಷ್ಟ್ರ ಸರ್ಕಾರವನ್ನು ಆಗ್ರಹಿಸಿದರು.

Join Whatsapp
Exit mobile version