Home ಟಾಪ್ ಸುದ್ದಿಗಳು ನಾಳೆ ಫೈನಲ್ ಫೈಟ್ : ರಾಜ್ಯಸಭೆಯ 1 ಸ್ಥಾನಕ್ಕೆ 3 ಪಕ್ಷಗಳ ಪೈಪೋಟಿ | ಬಿಜೆಪಿಯಿಂದ...

ನಾಳೆ ಫೈನಲ್ ಫೈಟ್ : ರಾಜ್ಯಸಭೆಯ 1 ಸ್ಥಾನಕ್ಕೆ 3 ಪಕ್ಷಗಳ ಪೈಪೋಟಿ | ಬಿಜೆಪಿಯಿಂದ ಮಿಡ್ ನೈಟ್ ಮೀಟಿಂಗ್

ಬೆಂಗಳೂರು: ನಾಳೆ ಫೈನಲ್ ಫೈಟ್. ರಾಜ್ಯಸಭೆ ಎಲೆಕ್ಷನ್​​ ಕೊನೆಯ ಘಟ್ಟದಲ್ಲಿದೆ. ಇಂದು ಮತ ಲೆಕ್ಕಾಚಾರದ ಕಸರತ್ತು ನಡೆಯಲಿದೆ. ಒಂದು ಸ್ಥಾನಕ್ಕೆ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು 4 ಸ್ಥಾನಕ್ಕೆ 3 ಪಕ್ಷಗಳಿಂದ 6 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

ನಿರ್ಮಲಾ ಸೀತಾರಾಮನ್​ , ಜಗ್ಗೇಶ್​, ಜೈರಾಮ್​​ ರಮೇಶ್​ ಆಯ್ಕೆ ಸುಲಭವಾಗಿದೆ. ಲೆಹರ್​ಸಿಂಗ್​​, ಕುಪೇಂದ್ರ ರೆಡ್ಡಿ, ಮನ್ಸೂರ್​​​​ ಆಯ್ಕೆ ಕಷ್ಟದಾಯಕವಾಗಿದೆ. ಶಾಸಕರ ಹಿಡಿದಿಡಲು ಕೊನೆ ಹಂತದ ಕಸರತ್ತು ಮೂರೂ ಪಕ್ಷಗಳು ಮಾಡುತ್ತಿದೆ. ಬಿಜೆಪಿಯಿಂದ ಮಿಡ್​​ನೈಟ್​​​ ಮೀಟಿಂಗ್ ಮಹಾ ತಂತ್ರ ಹೂಡುತ್ತಿದೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ ವೋಟಿಂಗ್​​​ ಕುರಿತು ಪಾಠ ನಡೆಸಿದ್ದಾರೆ. ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲ್ಲಿಸಿಕೊಳ್ಳಲು ರಣತಂತ್ರ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ನಾಳೆ ಮತದಾನ ಮತ್ತು ನಾಳೆಯೇ ಲೆಕ್ಕಾಚಾರ ನಡೆಯಲಿದ್ದು ರಾಜ್ಯಸಭೆಗೆ ಆಯ್ಕೆಯಾಗು ನಾಲ್ಕನೇ ಅಭ್ಯರ್ಥಿ ಯಾರು ಎಂದು ಕಾದುನೋಡಬೇಕಾಗಿದೆ

Join Whatsapp
Exit mobile version