ಮಂಗಳೂರು: ಚಿತ್ರನಟ, ರಂಗಭೂಮಿ ಕಲಾವಿದ, ಸಾಮಾಜಿಕ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಯೇಸು ಪ್ರಕಾಶ್ ಕಲ್ಲುಕೊಪ್ಪ(58) ಶನಿವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು.
ಪುನೀತ್ ರಾಜಕುಮಾರ್, ಯಶ್, ದರ್ಶನ್ ಹೀಗೆ ಖ್ಯಾತ ನಟರ ಸಿನಿಮಾಗಳಲ್ಲಿ ಯೇಸುಪ್ರಕಾಶ್ ಅಭಿನಯಿಸಿದ್ದಾರೆ ಅಲ್ಲದೆ, ನೀನಾಸಂ ಜೊತೆ ರಂಗಭೂಮಿ ನಾಟಕಗಳಲ್ಲೂ ತೊಡಗಿಕೊಂಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ. ಪ್ರಕಾಶ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಶಿವಮೊಗ್ಗದ ಸಾಗರದಲ್ಲಿರುವ ಕಲ್ಲುಕೊಪ್ಪದ (ಪುರಪ್ಪೇಮನೆ) ಅವರ ಸ್ವಗೃಹದಲ್ಲಿ ಅವಕಾಶ ಕಲ್ಪಿಸಲಾಗಿದೆ ಕುಟುಂಬಸ್ಥರು ತಿಳಿಸಿದ್ದಾರೆ.