Home ಟಾಪ್ ಸುದ್ದಿಗಳು ವಿಮಾನದಲ್ಲಿ ಕಡತ ಪರಿಶೀಲನೆ| ಮೋದಿಯ ಫೋಟೋ ಪ್ರಚಾರವನ್ನು ಅಣಕಿಸಿದ ನೆಟ್ಟಿಗರು!

ವಿಮಾನದಲ್ಲಿ ಕಡತ ಪರಿಶೀಲನೆ| ಮೋದಿಯ ಫೋಟೋ ಪ್ರಚಾರವನ್ನು ಅಣಕಿಸಿದ ನೆಟ್ಟಿಗರು!

ಹೊಸದಿಲ್ಲಿ: ಅಮೆರಿಕಕ್ಕೆ ವಿಮಾನ ಹಾರಾಟದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಡತ ಪರಿಶೀಲನೆ ನಡೆಸುತ್ತಿರುವ ಪ್ರಚಾರ ತಂತ್ರದ ಚಿತ್ರವನ್ನು ನೆಟ್ಟಿಗರು ಅಣಕಿಸಿದ್ದಾರೆ. ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಮಾಜಿ ಪ್ರಧಾನಿಗಳು ವಿಮಾನದಲ್ಲಿ ಕುಳಿತು ತಮ್ಮ ಕೆಲಸದಲ್ಲಿ ತಲ್ಲೀನರಾದ ಚಿತ್ರಗಳನ್ನು ಟ್ವೀಟ್ ಮಾಡಿದೆ.

ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ವಿಮಾನದಲ್ಲಿ ಕುಳಿತು ಕೆಲಸ ಮಾಡುತ್ತಿರುವ ಚಿತ್ರಗಳನ್ನು ಇಂಡಿಯನ್ ಎಕ್ಸ್‌ಪ್ರೆಸ್ ಹಂಚಿಕೊಂಡಿದೆ. ಇದು ಟ್ವಿಟ್ಟರ್‌ನಲ್ಲಿ ಭಾರೀ ವೈರಲ್ ಆಗಿದೆ.

ಮೋದಿ ತಮ್ಮ ಚಿತ್ರವನ್ನು ‘ಸುದೀರ್ಘ ಪ್ರಯಾಣವು ಕಡತಗಳ ಪರಿಶೀಲನೆಗೆ ಒಂದು ಅವಕಾಶ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.

ವಿಶೇಷ ಬೆಳಕುಗಳನ್ನು ಬಳಸಿ ಚಿತ್ರ ತೆಗೆಯಲಾಗಿದ್ದು, ಕಡತದ ಕೆಳಗಿನಿಂದ ಕಾಣುವ ಬೆಳಕನ್ನು ನೆಟ್ಟಿಗರು ಅಣಕಿಸಿದ್ದಾರೆ. ‘ಪ್ರತಿಯೊಬ್ಬರೂ ಫೈಲ್ ಮೇಲೆ ಬೆಳಕನ್ನಿಟ್ಟು ನೋಡುತ್ತಾರೆ. ಆದರೆ ಮೋದಿಜಿ ಫೈಲ್ ಕೆಳಗೆ ಬೆಳಕನ್ನಿಟ್ಟು ನೋಡುತ್ತಿದ್ದಾರೆ.’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೋದಿಯವರು ಅಮೇರಿಕಾ ಭೇಟಿ ಮಾಡುತ್ತಿದ್ದಾರೆ. ಮೂರು ದಿನಗಳ ಅಧಿಕೃತ ಭೇಟಿಯಲ್ಲಿ, ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಜಪಾನ್ ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

Join Whatsapp
Exit mobile version