Home ಕ್ರೀಡೆ ವಿಶ್ವಕಪ್ ಫೈನಲ್‌ಗೂ ತಟ್ಟಿದ ಪ್ಯಾಲೆಸ್ತೀನ್ ಪರ ಹೋರಾಟ: ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿಕೊಂಡ ಯುವಕ

ವಿಶ್ವಕಪ್ ಫೈನಲ್‌ಗೂ ತಟ್ಟಿದ ಪ್ಯಾಲೆಸ್ತೀನ್ ಪರ ಹೋರಾಟ: ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ತಬ್ಬಿಕೊಂಡ ಯುವಕ

ಅಹ್ಮದಾಬಾದ್: ಇಲ್ಲಿ ನಡೆಯುತ್ತಿರುವ ಐಸಿಸಿ 2023 ವಿಶ್ವಕಪ್ ಪಂದ್ಯದಲ್ಲಿ ಬಿಗಿ ಭದ್ರತೆಯ ನಡುವೆಯೂ ಕ್ರಿಕೆಟ್ ಮೈದಾನಕ್ಕೆ ನುಗ್ಗಿ ಯುವಕನೋರ್ವ ವಿರಾಟ್ ಕೊಹ್ಲಿಯತ್ತ ಧಾವಿಸಿ ಆತನನ್ನು ತಬ್ಬಿಕೊಂಡ ಘಟನೆ ವರದಿಯಾಗಿದೆ. ಯುವಕ ‘ಪ್ಯಾಲೆಸ್ತೀನ್ ಮೇಲೆ ಬಾಂಬ್ ದಾಳಿ ನಿಲ್ಲಿಸಿ’ ಎಂದು ಬರೆದಿದ್ದ ಟೀ ಶರ್ಟ್‌ ಧರಿಸಿದ್ದನು.

ಯುವಕನನ್ನು ಚೀನಾ-ಫಿಲಿಪಿನೋ ಮೂಲದ ಆಸ್ಟ್ರೇಲಿಯಾ ವ್ಯಕ್ತಿ ವೇಯ್ನ್ ಜಾನ್ಸನ್ ಎಂದು ಗುರುತಿಸಲಾಗಿದೆ. ವೇಯ್ನ್ ಜಾನ್ಸನ್ ನ್ನು ಬಂಧಿಸಿ ಚಾಂದ್ ಖೇಡಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ಜಾನ್ಸನ್ ಪ್ಯಾಲೆಸ್ತೀನ್ ಧ್ವಜದ ವಿನ್ಯಾಸದ ಮಾಸ್ಕ್ ಮತ್ತು ಎರಡೂ ಬದಿಗಳಲ್ಲಿ ಸ್ಲೋಗನ್‌ಗಳನ್ನು ಹೊಂದಿದ್ದ ಟಿ-ಶರ್ಟ್ ನ್ನು ಧರಿಸಿದ್ದರು. ಟೀ-ಶರ್ಟ್‌ನ ಮುಂಭಾಗದಲ್ಲಿ, ‘ಪ್ಯಾಲೆಸ್ತೀನ್ ಬಾಂಬ್ ಸ್ಫೋಟವನ್ನು ನಿಲ್ಲಿಸಿ’ ಎಂದು ಮತ್ತು ಹಿಂಭಾಗದಲ್ಲಿ, ‘ಪ್ಯಾಲೆಸ್ತೀನ್ ಉಳಿಸಿ’ ಎಂದು ಬರೆಯಲಾಗಿತ್ತು. ಆತ ಹಠಾತ್ ಒಳನುಗ್ಗಿದ್ದು, ಭದ್ರತಾ ಸಿಬ್ಬಂದಿ ಆತನನ್ನು ತ್ವರಿತವಾಗಿ ಬಂಧಿಸಿದ್ದಾರೆ.

Join Whatsapp
Exit mobile version