Home ಟಾಪ್ ಸುದ್ದಿಗಳು ಬಾಲಕನ ರಕ್ಷಿಸಲು ಹೋದ ಐವರ ದುರ್ಮರಣ: ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಹೃದಯವಿದ್ರಾವಕ ದೃಶ್ಯ!

ಬಾಲಕನ ರಕ್ಷಿಸಲು ಹೋದ ಐವರ ದುರ್ಮರಣ: ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಹೃದಯವಿದ್ರಾವಕ ದೃಶ್ಯ!

ಗಾಜಿಯಾಬಾದ್: ​ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಒಬ್ಬನ ಪ್ರಾಣವನ್ನು ಉಳಿಸಲು ಹೋಗಿ ಐದು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ‌. ಅಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಈ ಸಮಯದಲ್ಲಿ ವಿದ್ಯುತ್‌ ಕಂಬ ಮುಟ್ಟಿದುದರ ಪರಿಣಾಮವಾಗಿ ಈ ದುರ್ಘಟನೆ ನಡೆದಿದೆ. ಈ ಹೃದಯ ವಿದ್ರಾವಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಳೆ ಸುರಿಯುತ್ತಿದ್ದಾಗ ಅಂಗಡಿವೊಂದರ ಮುಂದಿನ ಶೆಡ್​ನ ಕಂಬವೊಂದರಲ್ಲಿ ವಿದ್ಯುತ್​ ಪ್ರವಹಿಸುತ್ತಿತ್ತು. ಅಂಗಡಿಗೆ ಹೋಗಿದ್ದ ಮಕ್ಕಳಿಬ್ಬರು ಇದು ಅರಿಯದೆ ವಿದ್ಯುತ್‌ ಕಂಬ ಹಿಡಿದುಕೊಂಡಿದ್ದಾರೆ. ತಕ್ಷಣವೇ ಇಬ್ಬರೂ ಮೃತಪಟ್ಟಿದ್ದಾರೆ.

ಬಾಲಕನೊಬ್ಬ ಅವರ ರಕ್ಷಣೆಗೆ ಧಾವಿಸಿದ್ದಾನೆ. ಅವನಿಗೂ ವಿದ್ಯುತ್‌ ತಗುಲಿ ಮೃತಪಟ್ಟಿದ್ದಾನೆ. ಇಷ್ಟಾದರೂ ಅಲ್ಲಿ ವಿದ್ಯುತ್‌ ಪ್ರಹರಿಸುತ್ತಿದೆ ಎಂಬುದು ತಿಳಿಯದೇ ಅವರ ರಕ್ಷಣೆಗೆ ಓರ್ವ ಮಹಿಳೆ ಮತ್ತು ಮತ್ತಿಬ್ಬರು ಧಾವಿಸಿದ್ದಾರೆ. ಅವರೂ ಕ್ಷಣದಲ್ಲಿಯೇ ಮೃತಪಟ್ಟಿದ್ದಾರೆ‌.

ಮೃತಪಟ್ಟವರಲ್ಲಿ ಮೂವರು ಮಕ್ಕಳಾಗಿದ್ದು, ಇಬ್ಬರು ಒಂದೇ ಕುಟುಂಬದವರು ಎನ್ನಲಾಗಿದೆ. ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ನೋಡಿದವರ ಕರುಳು ಹಿಂಡುವಂತಿದೆ.

Join Whatsapp
Exit mobile version