Home ಗಲ್ಫ್ ಫಿಫಾ ವಿಶ್ವಕಪ್’ಗೆ ಆತಿಥ್ಯ: ಕತಾರ್’ಗೆ ಯುಎಇ ಅಧ್ಯಕ್ಷರಿಂದ ಅಭಿನಂದನೆ

ಫಿಫಾ ವಿಶ್ವಕಪ್’ಗೆ ಆತಿಥ್ಯ: ಕತಾರ್’ಗೆ ಯುಎಇ ಅಧ್ಯಕ್ಷರಿಂದ ಅಭಿನಂದನೆ

ಅಬುಧಾಬಿ: ಫಿಫಾ ವಿಶ್ವಕಪ್’ಗೆ ಆತಿಥ್ಯ ವಹಿಸಿದ ಕತಾರ್ ಮತ್ತು ಅಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅಭಿನಂದಿಸಿದ್ದಾರೆ.

ವಿಶ್ವಕಪ್’ಗೆ ಆತಿಥ್ಯ ವಹಿಸಿದ್ದಕ್ಕಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ ಮತ್ತು ಈ ಪಂದ್ಯಾಕೂಟವನ್ನು ಯಶಸ್ಸುಗೊಳಿಸಲು ಯುಎಇ ಬೆಂಬಲ ಸೂಚಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಅವರಿಗೆ ತಿಳಿಸಿದರು.

ಇದು ಕತಾರ್ ಮತ್ತು ಅರಬ್ ಜಗತ್ತಿನ ಅತ್ಯುತ್ತಮ ಸಾಧನೆಯಾಗಿದೆ ಎಂದು ಅವರು ತಿಳಿಸಿದರು. ಕತಾರ್’ಗೆ ಬೆಂಬಲ ಸೂಚಿಸಿದ ಯುಎಇ ನಡೆಗೆ ಕತಾರ್ ದೊರೆ ಎಮಿರ್ ಶೇಖ್ ಝಾಯೆದ್ ಧನ್ಯವಾದ ಸಮರ್ಪಿಸಿದ್ದಾರೆ.

Join Whatsapp
Exit mobile version