Home ಟಾಪ್ ಸುದ್ದಿಗಳು ಭ್ರೂಣ ಹತ್ಯೆ ಪ್ರಕರಣ: ಪರಾರಿಯಾಗಿದ್ದ SPG ಆಸ್ಪತ್ರೆ ಮಾಲೀಕ ಬಂಧನ

ಭ್ರೂಣ ಹತ್ಯೆ ಪ್ರಕರಣ: ಪರಾರಿಯಾಗಿದ್ದ SPG ಆಸ್ಪತ್ರೆ ಮಾಲೀಕ ಬಂಧನ

ಬೆಂಗಳೂರು: ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿಯ ಎಸ್.ಪಿ.ಜಿ. ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಪ್ರಕರಣ ನಡೆದಿದ್ದು, ಆಸ್ಪತ್ರೆ ಮಾಲೀಕ ಹಾಗೂ ವೈದ್ಯ ಡಾ. ಶ್ರೀನಿವಾಸ್ ಪರಾರಿಯಾಗಿದ್ದರು. ಕೊನೆಗೂ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಎಸ್.ಪಿ.ಜಿ. ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ನಡೆದಿರುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಕಂಡು ಬಂದಿತ್ತು. ದಾಳಿ ವೇಳೆ ಆಸ್ಪತ್ರೆಯ ಮಾಲೀಕ ಡಾ. ಶ್ರೀನಿವಾಸ್ ಪರಾರಿಯಾಗಿದ್ದರು. ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಶ್ರೀನಿವಾಸ್ ಅವರನ್ನು ಬಂಧಿಸಿದ್ದು, ವಿಚಾರಣೆ ನಂತರ ಭ್ರೂಣ ಹತ್ಯೆಗೆ ಸಂಬಂಧಿಸಿದ ಮತ್ತಷ್ಟು ವಿಚಾರ ಬಯಲಾಗಲಿದೆ.

Join Whatsapp
Exit mobile version