Home ಕರಾವಳಿ ಅಡ್ಯಾರ್ ಅರ್ಕುಳ, ತುಂಬೆ ಗ್ರಾಮ ಪಂಚಾಯತ್ ಚುನಾವಣೆ ಗೆದ್ದ SDPI ಬೆಂಬಲಿತರಿಗೆ ಅಭಿನಂದನಾ ಸಮಾರಂಭ

ಅಡ್ಯಾರ್ ಅರ್ಕುಳ, ತುಂಬೆ ಗ್ರಾಮ ಪಂಚಾಯತ್ ಚುನಾವಣೆ ಗೆದ್ದ SDPI ಬೆಂಬಲಿತರಿಗೆ ಅಭಿನಂದನಾ ಸಮಾರಂಭ

ಮಂಗಳೂರು : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭ ಅರ್ಕುಳ ಯಶಸ್ವಿ ಹಾಲ್ ನಲ್ಲಿ ನಡೆಯಿತು.

ಅಡ್ಯಾರ್ ಅರ್ಕುಳ ಗ್ರಾಮ ಪಂಚಾಯತ್ ಮತ್ತು ತುಂಬೆ ಗ್ರಾಮ ಪಂಚಾಯತ್ ಗಳಲ್ಲಿ ವಿಜೇತರಾದ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿದ ಎಸ್ ಡಿಪಿಐ ಬೆಂಬಲಿತ ಎಲ್ಲಾ ಅಭ್ಯರ್ಥಿಗಳಿಗೂ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಅಡ್ಯಾರ್ ಅರ್ಕುಳ ಗ್ರಾಮ ಸಮಿತಿ ಎಸ್ ಡಿಪಿಐ ಅಧ್ಯಕ್ಷ ಯಾಸೀನ್ ವಳಚ್ಚಿಲ್ ವಹಿಸಿದ್ದರು. ದಿಕ್ಸೂಚಿ ಭಾಷಣ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮಾಡಿದರು.

 ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯ ರಿಯಾಝ್ ಫರಂಗಿಪೇಟೆ, ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೊ ಅವರೂ ದಿಕ್ಸೂಚಿ ಭಾಷಣ ಮಾಡಿದರು.

ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ, ಎಸ್ ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಲ್ಯಾನ್ಸಿ ಥೊರೆಸ್, ಅಝರ್ ಚೊಕ್ಕಬೆಟ್ಟು, ಎಸ್ ಡಿಪಿಐ ಅಡ್ಯಾರ್ ಅರ್ಕುಳ ಗ್ರಾಮ ಸಮಿತಿ ಸದಸ್ಯರಾದ ನಝೀರ್ ವಳಚ್ಚಿಲ್, ಮಂಗಳೂರು ಮಹಾನಗ ಪಾಲಿಕೆ ಕಾರ್ಪೊರೇಟರ್ ಮುನೀಬ್ ಬೆಂಗರೆ, ಎಸ್ ಡಿಪಿಐ ಮಂಗಳೂರು ಕ್ಷೇತ್ರ ಉಪಾಧ್ಯಕ್ಷ ಸುಲೈಮಾನ್ ಉಸ್ತಾದ್, ಎಸ್ ಡಿಪಿಐ ಮುಖಂಡ ರಶೀದ್ ಅರ್ಕುಳ, ಎನ್ ಡಬ್ಲ್ಯೂಎಫ್ ಮಂಚಿ ಘಟಕ ಅಧ್ಯಕ್ಷೆ ಝೀನತ್ ಮಂಚಿ, ಅರ್ಕುಳ ಅಡ್ಯಾರ್ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ಬಾಸ್, ಪುದು ಗ್ರಾಮ ಪಂಚಾಯತ್ ಸದಸ್ಯ ನಝೀರ್ ಹತ್ತನೇ ಮೈಲ್ ಕಲ್ಲು, ಎಸ್ ಡಿಪಿಐ ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಅಮೆಮ್ಮಾರ್, ಎಸ್ ಡಿಪಿಐ ಮುಖಂಡರಾದ ಇರ್ಫಾನ್ ತುಂಬೆ, ಮೊಹಮ್ಮದ್ ಮಲಾರ್, ವಿ. ನಝೀರ್, ಮೊಹಮ್ಮದ್ ಕಲ್ಲಾಪು, ರಮೀಝ್ ಅರ್ಕುಳ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version