Home ಟಾಪ್ ಸುದ್ದಿಗಳು ಫೆ. 16 ರಂದು ಭಾರತ ಬಂದ್ ಗೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ

ಫೆ. 16 ರಂದು ಭಾರತ ಬಂದ್ ಗೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ

ನವದೆಹಲಿ: ಹಲವು ಬೇಡಿಕೆಗಳ ಈಡೇರಿಕೆಗಾಗಿ ದೆಹಲಿ ಚಲೋ ಚಳವಳಿಯನ್ನು ಹಮ್ಮಿಕೊಂಡಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಇದೀಗ ಫೆಬ್ರವರಿ 16ರಂದು ಗ್ರಾಮೀಣ ಭಾರತ ಬಂದ್ ಗೆ ಕರೆ ನೀಡಿದೆ.


ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್ ನಡಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳೊಂದಿಗೆ ರೈತ ಸಂಘಗಳು ತಮ್ಮ ಇತರ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿರಿಸಲು ಫೆಬ್ರವರಿ 16 ರಂದು ದೇಶಾದ್ಯಂತ ಗ್ರಾಮೀಣ ಭಾರತ್ ಬಂದ್ ಎಂದು ಕರೆಯಲಾಗುವ ಮುಷ್ಕರಕ್ಕೆ ಕರೆ ನೀಡಿವೆ. ಎಸ್ ಕೆಎಂ ಮತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಗ್ರಾಮೀಣ ಭಾರತ್ ಬಂದ್ ಫೆಬ್ರವರಿ 16 ರಂದು ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ನಡೆಯಲಿದೆ.

Join Whatsapp
Exit mobile version