Home ಟಾಪ್ ಸುದ್ದಿಗಳು ಹೆಂಡತಿಯೊಡನೆ ಜಗಳವಾಡಿ ಮಗನನ್ನು ಬಾಲ್ಕನಿಯಿಂದ ಕೆಳಕ್ಕೆಸೆದ ತಂದೆ

ಹೆಂಡತಿಯೊಡನೆ ಜಗಳವಾಡಿ ಮಗನನ್ನು ಬಾಲ್ಕನಿಯಿಂದ ಕೆಳಕ್ಕೆಸೆದ ತಂದೆ

ನವದೆಹಲಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೋರ್ವ ತನ್ನ ಎರಡು ವರ್ಷದ ಮಗನನ್ನು ಮನೆಯ ಬಾಲ್ಕನಿಯಿಂದ ಕೆಳಕ್ಕೆಸೆದ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.
ಮಾನ್ ಸಿಂಗ್ ಮತ್ತು ಪೂಜಾ ದಂಪತಿ ನಡುವೆ ಕೌಟುಂಬಿಕ ಕಲಹ ಉಂಟಾದ ಹಿನ್ನೆಲೆಯಲ್ಲಿ ಕೆಲವು ತಿಂಗಳುಗಳಿಂದ ಅವರಿಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ನಿನ್ನೆ ರಾತ್ರಿ ಮನೆಗೆ ಬಂದ ಮಾನ್ ಸಿಂಗ್ ಮಡದಿಯ ಜತೆ ಜಗಳವಾಡಿ ಎರಡು ವರ್ಷದ ಮಗನನ್ನು ಬಾಲ್ಕನಿಯಿಂದ ಕೆಳಕ್ಕೆ ಎಸೆದಿದ್ದಾನೆ.


ದಿಲ್ಲಿಯಲ್ಲಿ ಒಬ್ಬ ವ್ಯಕ್ತಿ ಮೂರು ಮಹಡಿಯ ಮನೆಯ ಬಾಲ್ಕನಿಯಿಂದ ಸಣ್ಣ ಹುಡುಗನನ್ನು ಕೆಳಕ್ಕೆ ಎಸೆದಿರುವುದು ಹಾಗೂ ಬೆನ್ನಿಗೇ ಆತನೂ ಜಿಗಿದಿರುವುದು ವರದಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಅಪ್ಪ ಮಗ ಇಬ್ಬರನ್ನೂ ಎಐಐಎಂಎಸ್- ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಇನ್ ಸ್ಟಿಟ್ಯೂಟ್ ಆಸ್ಪತ್ರೆಗೆ ಸೇರಿಸಲಾಗಿದೆ.
ದಿಲ್ಲಿಯ ಕಲ್ಕಾಜಿಯ ಸ್ಲಂ ಪ್ರದೇಶದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ.


ನಿನ್ನೆ ರಾತ್ರಿ ಬಂದ ಮಾನ್ ಸಿಂಗ್ ಹೆಂಡತಿಯ ಜೊತೆಗೆ ಕೂಗಾಡಿ ಜಗಳವಾಡಿದ್ದಾನೆ. ಪೂಜಾ ಆತನ ಮನೆ ಬಿಟ್ಟು ಬಂದು ಕೆಲವು ತಿಂಗಳುಗಳಿಂದ ಕಲ್ಕಾಜಿಯಲ್ಲಿನ ತನ್ನ ಅಜ್ಜಿ ಮನೆಯಲ್ಲಿ ತನ್ನ ಇಬ್ಬರು ವಾಸಿಸುತ್ತಿದ್ದಳು.
ಬಂದವನೇ ಜಗಳವಾಡಿ ಸಿಟ್ಟಿನಿಂದ ಬಾಲ್ಕನಿಗೆ ಮಗನನ್ನು ಎತ್ತಿಕೊಂಡು ಹೋಗಿ 21 ಅಡಿ ಕೆಳಗಿನ ಸಿಮೆಂಟ್ ನೆಲಕ್ಕೆ ಎಸೆದಿದ್ದಾನೆ, ಅನಂತರ ತಾನೂ ಜಿಗಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾನ್ ಸಿಂಗ್ ಕುಡಿತದ ಅಮಲಿನಲ್ಲಿದ್ದ ಎಂದು ಪೂಜಾಳ ಅಜ್ಜಿ ಹೇಳಿದ್ದಾಳೆ.

Join Whatsapp
Exit mobile version