ಭುವನೇಶ್ವರ: ಒಡಿಶಾ ರೈಲು ದುರಂತದಲ್ಲಿ ಮಡಿದ ಹೆಣಗಳ ರಾಶಿಯಿಂದ ತಂದೆಯೊಬ್ಬರು ತನ್ನ ಮಗನನ್ನು ಜೀವಂತವಾಗಿ ಹೊರತೆಗೆದ ಘಟನೆ ವರದಿಯಾಗಿದೆ.
ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾದ ಬಾಲಾಸೋರ್ನ ಶಾಲೆಯೊಂದರಲ್ಲಿ ಹೆಣಗಳ ರಾಶಿಯೇ ಇತ್ತು. ಆಂಬ್ಯುಲೆನ್ಸ್‌ನಲ್ಲಿ 230 ಕಿಮೀ ದೂರದಲ್ಲಿರುವ ಮಗನನ್ನು ಹುಡುಕಲು ಬಂದಿದ್ದ ತಂದೆಯೊಬ್ಬರು ಮಗನನ್ನು ಶವಾಗಾರದಿಂದ ಹೊರತೆಗೆದು ಆಸ್ಪತ್ರೆಗೆ ಸೇರಿಸಿದ್ದಾರೆ.
ಎಸ್ ಎಸ್ ಕೆಎಂ ಆಸ್ಪತ್ರೆಯ ಟ್ರಾಮಾ ಕೇರ್ ಯೂನಿಟ್ ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಬಿಸ್ವಜಿತ್ ಮಲಿಕ್ ಸೋಮವಾರ ಮತ್ತೊಂದು ಸುತ್ತಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರೀಕ್ಷೆಯಿದೆ. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಆದರೆ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.