Home ಟಾಪ್ ಸುದ್ದಿಗಳು ಮಗಳನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ತಂದೆ

ಮಗಳನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ತಂದೆ

ಮಥುರಾ: ಕೆಂಪು ಬಣ್ಣದ ಟ್ರಾಲಿ ಸೂಟ್ ಕೇಸ್ ನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾದ ಘಟನೆ ಯಮುನಾ ಎಕ್ಸ್ಪ್ರೆಸ್ ವೇ ಸರ್ವೀಸ್ ರಸ್ತೆಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಬಳಿ ಶುಕ್ರವಾರ ನಡೆದಿದೆ.


ಈ ಮೃತದೇಹ ದೆಹಲಿಯ ಮೋಡ್ಬಂದ್ ಎಂಬ ಪ್ರದೇಶದ ನಿವಾಸಿ ನಿತೇಶ್ ಯಾದವ್ ಅವರ ಪುತ್ರಿ ಆಯುಷಿ ಯಾದವ್ (21) ಎಂದು ತಿಳಿದು ಬಂದಿದ್ದು, ಮರ್ಯಾದೆಗೆ ಅಂಜಿ ತಂದೆಯೇ ಗುಂಡಿಕ್ಕಿ ಕೊಂದಿರುವುದು ವಿಚಾರಣೆ ವೇಳೆ ಬಯಲಾಗಿದೆ.


ನ.17 ರಂದು ಮಧ್ಯಾಹ್ನ ಕೊಲೆ ನಡೆದಿದ್ದು, ಮೃತದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿ ತನ್ನದೇ ಕಾರಿನಲ್ಲಿ ತಂದು ಯಮುನಾ ಎಕ್ಸ್ಪ್ರೆಸ್ ವೇ ಸರ್ವಿಸ್ ರಸ್ತೆಯಲ್ಲಿ ಎಸೆದು ಹೋಗಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಭಾನುವಾರ ತಡರಾತ್ರಿ ತಾಯಿ ಹಾಗೂ ಸಹೋದರ ಮೃತದೇಹವನ್ನು ಗುರುತಿಸಿದ್ದಾರೆ. ನಂತರ ಪೊಲೀಸರು ಸಂಶಯ ಬಂದು ತಂದೆಯನ್ನು ವಿಚಾರಣೆಗೊಳಪಡಿಸಿದಾಗ ನಿಜ ಬಯಲಾಗಿದೆ.

Join Whatsapp
Exit mobile version