ಕಡಬ: ಸ್ವತಃ ಮಾವನೇ ತನ್ನ ಅಪ್ರಾಪ್ತ ಸೊಸೆಯನ್ನು ಗರ್ಭಿಣಿಯನ್ನಾಗಿಸಿದ ಘಟನೆ ಕಡಬದಲ್ಲಿ ನಡೆದಿದೆ.
ಕಡಬ ತಾಲೂಕಿನ ಕೊಂಬಾರಿನ ಮರುವಂಜೆಯ ನಿವಾಸಿ ರುಕ್ಮಯ್ಯ ಎಂಬಾತ ಸೊಸೆಯನ್ನು ಗರ್ಭಿಣಿಯನ್ನಾಗಿಸಿದ ಮಾವ ಎಂದು ತಿಳಿದು ಬಂದಿದೆ.
ರುಕ್ಮಯ್ಯ ತನ್ನ ಸಂಬಂಧಿಯಾದ 17 ವರ್ಷದ ಬಾಲಕಿಯ ಮೇಲೆ ಕಳೆದ ಫೆಬ್ರವರಿ ತಿಂಗಳಿನಿಂದ ನಾಲ್ಕೈದು ಬಾರಿ ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ. ಆಶಾ ಕಾರ್ಯಕರ್ತೆಯೋರ್ವರು ಬಾಲಕಿಯ ಮನೆಗೆ ಭೇಟಿ ನೀಡಿದ ಸಂದರ್ಭ ಆಕೆ ಗರ್ಭಿಣಿ ಎಂದು ಬೆಳಕಿಗೆ ಬಂದಿದೆ. ಬಳಿಕ ಅಪ್ರಾಪ್ತೆ ತನ್ನ ಮಾವನೇ ಈ ರೀತಿ ಮಾಡಿದ್ದಾನೆ ಎಂದು ಆಶಾ ಕಾರ್ಯಕರ್ತೆಯೊಂದಿಗೆ ಹೇಳಿದ್ದಾಳೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.