ಹೋಂ ವರ್ಕ್ ಮಾಡದ ಮಗನಿಗೆ ಕ್ರೂರಿ ತಂದೆ ಕೊಟ್ಟ ಶಿಕ್ಷೆ ಏನು ಗೊತ್ತಾ ?

Prasthutha: November 25, 2021

ರಾಜಸ್ಥಾನ: ಶಾಲೆಯ ಹೋಂ ವರ್ಕ್ ಮಾಡದ 8 ವರ್ಷ ಪ್ರಾಯದ ಮಗನನ್ನ ಕ್ರೂರಿ ತಂದೆಯೊಬ್ಬ, ಮಗನ ಕೈ ಕಾಲನ್ನು  ಕಟ್ಟಿಹಾಕಿ, ತಲೆಕೆಳಗಾಗಿಸಿ ಸೀಲಿಂಗ್ ಫ್ಯಾನ್’ಗೆ ನೇತಾಡಿಸಿದ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಬುಂಡಿ ಜಿಲ್ಲೆಯ ದಾಬಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸ್ವಂತ ಮಗನನ್ನು ತಂದೆ ಕ್ರೂರವಾಗಿ ಹಿಂಸಿಸುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಬಾಲಕನ ಕಿರುಚಾಟ ಕೇಳಿ ಓಡಿಬಂದ ತಾಯಿ, ಹೃದಯಹೀನ ತಂದೆಯ ಕೈಯಿಂದ ಮಗನನ್ನು ರಕ್ಷಿಸಿದ್ದಾಳೆ. ಮಗನ ಅಸಹಾಯಕ ಸ್ಥಿತಿಯನ್ನು ಮೊಬೈಲ್’ನಲ್ಲಿ ಚಿತ್ರೀಕರಿಸಿದ ತಾಯಿ ತನ್ನ ಸಹೋದರನಿಗೆ ತೋರಿಸಿದ್ದಾಳೆ. ಬಳಿಕ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ.

ನವೆಂಬರ್ 17ರಂದು ಘಟನೆ ನಡೆದಿದ್ದು, ಪಾಪಿ ತಂದೆ ಗಣಿ ಕಾರ್ಮಿಕನಾಗಿದ್ದಾನೆ. ತನ್ನ 8 ವರ್ಷದ ಮಗ ಹಾಗೂ 5 ವರ್ಷದ ಮಗಳನ್ನು ಈತ ನಿರಂತರವಾಗಿ ವಿನಾ ಕಾರಣ ಹಿಂಸಿಸುತ್ತಿದ್ದ ಎನ್ನಲಾಗಿದೆ. ಈತನ ಹಿಂಸಾತ್ಮಕ ಸ್ವಭಾವದಿಂದ ರೋಸಿ ಹೋಗಿರುವ ಕುಟುಂಬ ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದಾರೆ. ಒಂದು ವೇಳೆ ದೂರು ನೀಡಿದರೆ ಈತನ ಉಪಟಳ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕುಟುಂಬದವರು ಹೇಳಿದ್ದಾರೆ.

ಆದರೆ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬುಂಡಿ SPಯವರಿಗೆ ಸೂಚನೆ ನೀಡಿದ್ದು, ಮೂರು ದಿನದ ಒಳಗಾಗಿ ವರದಿ ನೀಡುವಂತೆ ಸೂಚಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!