ಮುಂಬೈ: ಐದು ವರ್ಷದ ಮಗಳನ್ನು ಮನಬಂದಂತೆ ಥಳಿಸಿ, ಸಿಗರೇಟಿನಿಂದ ಸುಟ್ಟ ಆರೋಪದಡಿ ತಂದೆಯ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪತಿಯ ವಿರುದ್ಧ ಪತ್ನಿ ದೂರು ನೀಡಿದ್ದಾರೆ. ಮಗುವನ್ನು ಸಿಗರೇಟಿನಿಂದ ಸುಡುತ್ತಿರುವ ಮತ್ತು ಥಳಿಸಿದ ವಿಡಿಯೊವನ್ನು ತನ್ನ ಪತ್ನಿಗೆ ಕಳುಹಿಸಿದ್ದಾನೆ. ಈ ವಿಡಿಯೊ ಆಧಾರದ ಮೇಲೆ ಆಕೆ ಪೊಲೀಸರಿಗೆ ದೂರು ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ರಾಜೇಶ್‌ರಾಮ್ ಎಂದು ಗುರುತಿಸಲಾಗಿದೆ.
‘ತನ್ನ ಮಗಳು ಸಂಜನಾಳ ಮೇಲೆ ಆಕೆಯ ತಂದೆಯೇ ಕ್ರೂರವಾಗಿ ಥಳಿಸಿ, ಸಿಗರೇಟಿನಿಂದ ಮಗುವಿನ ಕೆನ್ನೆಗಳನ್ನು ಸುಟ್ಟು ವಿಕೃತಿ ಮೆರೆದಿದ್ದಾನೆ’ ಎಂದು ತಾಯಿ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮಗುವನ್ನು ವಿಶ್ವಾಸಕ್ಕೆ ತೆಗೆದುಕೊಂಡ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನಿದ್ದೆ ಮಾಡದೆ ಇದ್ದ ಮಗುವನ್ನು ವಿಚಾರಿಸಿದಾಗ, ತಂದೆ ನನ್ನನ್ನು ಥಳಿಸಿರುವುದಾಗಿ ಹೇಳಿದೆ ಎಂದು ತಿಳಿದು ಬಂದಿದೆ
ಈ ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.