Home ಟಾಪ್ ಸುದ್ದಿಗಳು 50 ರುಪಾಯಿ ತೆಗೆದಿದ್ದ 10 ವರ್ಷದ ಪುತ್ರನನ್ನು ಥಳಿಸಿ ಕೊಂದ ತಂದೆ !

50 ರುಪಾಯಿ ತೆಗೆದಿದ್ದ 10 ವರ್ಷದ ಪುತ್ರನನ್ನು ಥಳಿಸಿ ಕೊಂದ ತಂದೆ !

ಥಾಣೆ: ಮನೆಯಿಂದ 50 ರೂಪಾಯಿ ತೆಗೆದಿದ್ದಾನೆ ಎಂದು ಆರೋಪಿಸಿ ಕ್ರೂರಿ ತಂದೆಯೊಬ್ಬ ತನ್ನ 10 ವರ್ಷ ವಯಸ್ಸಿನ ಪುತ್ರನನ್ನು ಮೃಗೀಯವಾಗಿ ಥಳಿಸಿ ಕೊಲೆ ಮಾಡಿದ ಘಟನೆ ಥಾಣೆಯಲ್ಲಿ ನಡೆದಿದೆ. ತಂದೆಯ ಕೈಯಿಂದಲೇ ಹತ್ಯೆಯಾದ ಬಾಲಕನನ್ನು ಕರಣ್ (10) ಎಂದು ಗುರುತಿಸಲಾಗಿದೆ.

ಡಿಸೆಂಬರ್ 30ರಂದು ಘಟನೆ ನಡೆದಿದ್ದು, ಕರಣ್ ಮೇಲೆ ಮೃಗೀಯವಾಗಿ ಹಲ್ಲೆ ನಡೆಸಿ ತಂದೆ ಬಬ್ಲು ಓಂಪ್ರಕಶ್ ಪ್ರಜಾಪತಿ (41) ಪರಾರಿಯಾಗಿದ್ದ. ತಲೆಗೆ ಗಂಭೀರ ಗಾಯವಾದ ಪರಿಣಾಮ ದಿನಪೂರ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕರಣ್ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾನೆ. ಬಳಿಕ ಕರಣ್ ಮೃತದೇಹವನ್ನು ಕಂಬಳಿಯೊಂದರಲ್ಲಿ ಸುತ್ತಿಡಲಾಗಿತ್ತು. ಸಮೀಪದ ಮನೆಯವರಿಂದ ಮಾಹಿತಿ ಪಡೆದ ಪೊಲೀಸರು ಗಾಯ್ಕರ್ ಮೈದಾನದ ಸಮೀಪದ ಠಾಕುರ್’ಪದ ಸ್ಲಮ್ ಪ್ರದೇಶಕ್ಕೆ ತೆರಳಿ ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಕರಣ್ ಅದಾಗಲೇ ಮೃತಪಟ್ಟಿದ್ದ.

ಕರಣ್ ತಾಯಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಘಟನೆ ಬಗ್ಗೆ ಸಹೋದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. IPC ಸೆಕ್ಷನ್ 302ರ ಅಡಿ ಪ್ರಕರಣ ದಾಖಲಿಸಿಕೊಂಡ ಕಲ್ವಾ ಠಾಣೆಯ ಪೊಲೀಸರು ನಾಪತ್ತೆಯಾಗಿದ್ದ ಆರೋಪಿ ಬಬ್ಲು ಓಂಪ್ರಕಶ್ ಪ್ರಜಾಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Join Whatsapp
Exit mobile version