ಕಾರುಗಳ ನಡುವೆ ಭೀಕರ ಅಪಘಾತ; ಮೂವರು ಸಾವು

Prasthutha|

ಮಂಡ್ಯ: ಟಾಟಾ ಹೆಕ್ಸಾ ಹಾಗೂ ಸ್ವಿಫ್ಟ್ ಡಿಜೈರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ.

- Advertisement -


ಮೃತರನ್ನು ಉತ್ತರ ಪ್ರದೇಶದ 50 ವರ್ಷದ ನೀರಜ್ ಕುಮಾರ್ ಅವರ ಪತ್ನಿ 47 ವರ್ಷದ ಸೆಲ್ವಿ ಮತ್ತು ಮಂಡ್ಯದ ಕಾರು ಚಾಲಕ 35 ವರ್ಷದ ನಿರಂಜನ್ ಎಂದು ತಿಳಿದುಬಂದಿದೆ.


ಮಂಡ್ಯ ಜಿಲ್ಲೆ ಮದ್ದೂರು ಬಳಿಯ ಕಿಟ್ಟಿ ಡಾಬಾ ಬಳಿ ಟಾಟಾ ಹೆಕ್ಸಾ ಹಾಗೂ ಸ್ವಿಫ್ಟ್ ಡಿಜೈರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಟಾಟಾ ಹೆಕ್ಸಾ ಕಾರಿನಲ್ಲಿದ್ದ ಪತಿ-ಪತ್ನಿಗೆ ಗಂಭೀರ ಗಳಾಗಿದ್ದು ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗದೆ.