Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ರೈತರಿಂದ ‘ವಿಧಾನಸೌಧ’ ಚಲೋ

ಬೆಂಗಳೂರಿನಲ್ಲಿ ರೈತರಿಂದ ‘ವಿಧಾನಸೌಧ’ ಚಲೋ

ಬೆಂಗಳೂರು: ಸಂಯುಕ್ತ ಹೋರಾಟ, ಕರ್ನಾಟಕದಿಂದ ರೈತ ವಿರೋಧಿ ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ಧತಿಗಾಗಿ “ವಿಧಾನಸೌಧ ಚಲೋ”ಗೆ ಫ್ರೀಡಂ ಪಾರ್ಕ್ ಬಳಿ ಪೊಲೀಸರು ತಡೆಯೊಡ್ಡಿದ್ದು, ಪೋಲಿಸರ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ಅ ಬಳಿಕ  ಫ್ರೀಡಂ ಪಾರ್ಕ್ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ರೈತ ಹೋರಾಟಗಾರರು ಸರಕಾರಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಸಭೆಯನ್ನು ಉದ್ದೇಶಿ ಬಡಗ್ಲಪುರ ನಾಗೇಂದ್ರ ಮಾತನಾಡಿ, ಕರ್ನಾಟಕದಲ್ಲಿ ಇನ್ನು ಹೊಸ ಪಂಚಾಯತ್ ಪ್ರಾರಂಭವಾಗಲಿದೆ. ನಮ್ಮ ದೇಶದ ಪ್ರಧಾನಿ ಅನಾಗರಿಕ ಪ್ರಧಾನಿಯಾಗಿದ್ದಾರೆ. ರೈತರ ವಂಶವನ್ನು ನಾಶ ಮಾಡಲಾಗುತ್ತಿದೆ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಂತರ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರಾದ ಯುದುವೀರ್ ಸಿಂಗ್, ಇದು ಶೋಷಣೆ, ಬಂಡವಾಳಶಾಹಿ, ಅನ್ಯಾಯದ ವಿರುದ್ಧ ಮತ್ತು ನ್ಯಾಯದ ಪರವಾದ ಹೋರಾಟ. ಇದು ಸಮಾಜದ ಎಲ್ಲಾ ಸಮುದಾಯದವರು ನಡೆಸುವ ಹೋರಾಟವಾಗಿದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ದೊರೆಯಬೇಕು. ಸರಕಾರ ಈ ಆಂದೋಲನವನ್ನು ವಿರೋಧ ಪಕ್ಷದ, ಶ್ರೀಮಂತರ, ಖಲಿಸ್ತಾನಿಗಳ ಹೋರಾಟವೆಂದು ಬಿಂಬಿಸಿ ಚಳುವಳಿಯಲ್ಲಿ ಧಮನಿಸುವ ಪ್ರಯತ್ನ ನಡೆಸಿತ್ತು. ಇದು ಸಂಪೂರ್ಣ ಭಾರತದ ಹೋರಾಟವಾಗಿದೆ. ಜಾತಿ, ಧರ್ಮಗಳನ್ನು ಮೀರಿದ ಚಳುವಳಿಯಾಗಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಗೌರಿ ಲಂಕೇಶ್ ರನ್ನು ಹತ್ಯೆಗೈದ ಈ ಫ್ಯಾಸಿಸ್ಟ್ ಸರಕಾರದಿಂದ ಯಾವ ನಿರೀಕ್ಷೆಯನ್ನಿಟ್ಟುಕೊಳ್ಳಬೇಡಿ ಎಂದು ಹೇಳಿದ್ದಾರೆ.

ನಂತರ ಮಾತು ಮುಂದುವರಿಸಿದ ಅವರು ಹೋರಾಟಗಾರರ ವಿರುದ್ಧ ಈಡಿ ಯನ್ನು ಬಳಸಿ ಧಮನಿಸುತ್ತಿರುವುದೇ ಸರಕಾರದ ಅಭಿವೃದ್ಧಿಯ ತಂತ್ರ. ಈ ರೀತಿಯಾಗಿ ದೇಶವನ್ನು ಗುಲಾಮಗಿರಿಯತ್ತ ತಳ್ಳಲಾಗುತ್ತಿದೆ. ಜನಸಾಮಾನ್ಯರ ಅಭಿವೃದ್ಧಿಯ ಯೋಜನೆ ಈ ಸರಕಾರಕ್ಕಿಲ್ಲ. ಸರಕಾರವು ರಾಮ ಮಂದಿರವನ್ನು ಕಟ್ಟಿಸಿ ಅಭಿವೃದ್ಧಿಯ ಮಂತ್ರ ಪಠಿಸುತ್ತಿದೆ. ಸ್ವಾಭಿಮಾನದಿಂದ ಜನತೆ ಎದ್ದು ನಿಲ್ಲಬೇಕಾದ ಅವಶ್ಯಕತೆಯಿದೆ. ಇದು ಸುದೀರ್ಘವಾದ ಹೋರಾಟವಾಗಿದೆ. ಬೆಂಗಳೂರನ್ನೇ ದೆಹಲಿ ಮಾಡಿ.‌ ನಾಲ್ಕು ದಿಕ್ಕುಗಳಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಎಂದು ಕರೆ ನೀಡಿದ್ದಾರೆ.  

ಈ ವೇಳೆ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ನಾಯಕರಾದ ರಾಕೇಶ್ ಟಿಕಾಯತ್  “ದೇಶವನ್ನು ಮಾರುವುದು ಮಾತ್ರ ಸರಕಾರದ ಉದ್ದೇಶ. ಕಾನೂನು ಮಾಡುವುದಕ್ಕಿಂತ ಮೊದಲು ಗೋಡೌನು ನಿರ್ಮಿಸಲಾಗಿದೆ. ಬಂಡವಾಳಶಾಹಿಗಳಿಗೆ ಕಾನೂನು ಮಾಡುವ ಮೂಲಕ ಮೋದಿ ಸರಕಾರ ಅವರ ಪರವಾಗಿ ನಿಂತಿದೆ. ಈ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಟ್ಯಾಕ್ಟರ್ ನ್ನು ತಡೆಯುವುದು ರೈತರನ್ನೇ ತಡೆದಂತೆ. ಇವರು ಎಲ್ಲವನ್ನೂ ತಡೆಯಲು ಪ್ರಯತ್ನಿಸಿದ್ದರು. ತಡೆದ ಬ್ಯಾರಿಕೇಡ್ ನ್ನು ಒಡೆದು ಮುಂದುವರಿಯಲು ನೀವು ಕಲಿಯಬೇಕು.  ಜೈ ರಾಮ್, ಜೈ ಭೀಮ್, ಅಲ್ಲಾಹು ಅಕ್ಬರ್, ಹರೆ ಹರೆ ಮಾಹಾದೇವ್ ಘೋಷಣೆಯ ಮೂಲಕ ಈ ಚಳುವಳಿಯನ್ನು ನಾವು ಮುಂದುವರಿಸಬೇಕು ಎಂದು ಕರೆ ನೀಡಿದ್ದಾರೆ.

ಗುರುಪ್ರಾಸಾದ್ ಕೆರೆಗೂಡು, ದಿವಾಕರ್, ಚುಕ್ಕಿ ನಂಜುಂಡಸ್ವಾಮಿ, ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

Join Whatsapp
Exit mobile version