Home ಟಾಪ್ ಸುದ್ದಿಗಳು ಪ್ರತಿಭಟನಕಾರರ ಮೇಲೆ ದಾಳಿ | ಪ್ರತಿಭಟನಾ ಸ್ಥಳದತ್ತ ಧಾವಿಸುತ್ತಿರುವ ಇನ್ನಷ್ಟು ರೈತರು

ಪ್ರತಿಭಟನಕಾರರ ಮೇಲೆ ದಾಳಿ | ಪ್ರತಿಭಟನಾ ಸ್ಥಳದತ್ತ ಧಾವಿಸುತ್ತಿರುವ ಇನ್ನಷ್ಟು ರೈತರು

ನವದೆಹಲಿ : ಸಿಂಘು ಗಡಿಯಲ್ಲಿ ಹೋರಾಟ ನಿರತ ಪ್ರತಿಭಟನಕಾರರ ಮೇಲೆ ಸ್ಥಳೀಯರ ಹೆಸರಲ್ಲಿ ಗುಂಪೊಂದು ದಾಳಿ ನಡೆಸಿದ ಬೆನ್ನಲ್ಲೇ, ದೆಹಲಿಯತ್ತ ಇನ್ನೂ ಹೆಚ್ಚಿನ ಅನ್ನದಾತರು ಹೊರಟಿದ್ದಾರೆ ಎನ್ನಲಾಗುತ್ತಿದೆ.

ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್ ನಿಂದ ಪ್ರತಿ ಹಳ್ಳಿಗಳಿಂದಲೂ ಹೋರಾಟಗಾರರು ಮತ್ತೆ ಆಕ್ರೋಶ ಭರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಂಜೆ ಹೊತ್ತಿಗೆ ಇನ್ನಷ್ಟು ರೈತರು ಪ್ರತಿಭಟನಾ ಸ್ಥಳಕ್ಕೆ ಧಾವಿಸುತ್ತಿದ್ದಾರೆ ಎಂದು ವರದಿಯಾಗುತ್ತಿದೆ.

ಜಿಂದ್, ರೋಹ್ಟಕ್, ಹಿಸಾರ್, ಕೈತಾಲ್ ನಿಂದ ದೊಡ್ಡ ಸಂಖ್ಯೆಯಲ್ಲಿ ರೈತರು ದೆಹಲಿ ಗಡಿಯತ್ತ ಹೊರಟಿದ್ದಾರೆ ಎನ್ನಲಾಗುತ್ತಿದೆ. ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯದೆ, ಬಿಜೆಪಿಯ ಷಡ್ಯಂತ್ರಗಳನ್ನು ಹಿಮ್ಮೆಟ್ಟಿಸಿ, ರೈತ ಹೋರಾಟವನ್ನು ಯಶಸ್ವಿಗೊಳಿಸುತ್ತೇವೆ ಎಂದು ರೈತರು ಪಣತೊಟ್ಟಿದ್ದಾರೆ.

ಉತ್ತರ ಪ್ರದೇಶ, ಹರ್ಯಾಣಗಳಲ್ಲಿ ನಿನ್ನೆ ರಾತ್ರಿಯೇ ರೈತರು ಪಂಚಾಯತ್ ನಡೆಸಿದ್ದು, ಗ್ರಾಮಗಳಿಂದ ಮನೆಗೊಬ್ಬರಂತೆ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ನಿರ್ಧಾರ ಕೈಗೊಳ್ಳಲಾಗಿದೆ. ಕೆಲವೆಡೆ ಗ್ರಾಮದ ಧಾರ್ಮಿಕ ಕೇಂದ್ರಗಳ ಮೈಕ್ ಗಳಲ್ಲಿ ವಿಷಯವನ್ನು ಘೋಷಿಸಲಾಗಿದೆ. ಇದರಿಂದ, ಸ್ಫೂರ್ತಿಗೊಂಡ ರೈತರು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ್ದಾರೆ.  

Join Whatsapp
Exit mobile version