ರೈತರು ಖಲಿಸ್ತಾನಿಗಳಲ್ಲ, ನಮ್ಮ ಅನ್ನದಾತರು : ರಾಜನಾಥ ಸಿಂಗ್

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಲಿಸ್ತಾನಿ ಉಗ್ರರೆಂದು ಬಿಂಬಿಸಲು ಹೊರಟಿದ್ದ ಬಿಜೆಪಿಗರಿಗೆ ಕೊನೆಗೂ ಪ್ರತಿಭಟನೆಯ ಬಿಸಿ ತಟ್ಟಿದಂತಿದೆ. ರೈತರು ನಮ್ಮ ಅನ್ನದಾತರು, ಅವರು ಈ ದೇಶದ ಬೆನ್ನೆಲುಬು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಆ ಮೂಲಕ ಈ ಹಿಂದೆ ಬಿಜೆಪಿಗರು ನೀಡಿದ್ದ ಹೇಳಿಕೆಯಿಂದ ಹಿಂದೆ ಸರಿದು, ರೈತರನ್ನು ಓಲೈಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವಂತಿದೆ.

- Advertisement -

ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಖಲಿಸ್ತಾನಿಗಳು-ನಕ್ಸಲರು ಎಂದು ಬಿಂಬಿಸುತ್ತಿರುವುದಕ್ಕೆ ಅವರು ವಿಷಾಧ ವ್ಯಕ್ತಪಡಿಸಿದ್ದಾರೆ.

“ರೈತರ ಬಗ್ಗೆ ನಮಗೆ ಗೌರವವಿದೆ. ಆದರೆ ಅವರನ್ನು ಹೀಗೆ ಬಿಂಬಿಸುವುದು ಸರಿಯಲ್ಲ. ದೇಶವು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವಾಗ ರೈತರು ದೇಶವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಇಂತಹ ಅನೇಕ ಸಂದರ್ಭಗಳಲ್ಲಿ ರೈತರು ದೇಶವನ್ನು ಪೊರೆದಿದ್ದಾರೆ. ಅಂತಹವರ ಮೇಲೆ ಸುಳ್ಳು ಆರೋಪಗಳನ್ನು ಮಾಡಬಾರದು’’ ಎಂದು ಅವರು ಹೇಳಿದ್ದಾರೆ.

- Advertisement -

ರೈತ ಚಳವಳಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ನೋವಾಗಿದೆ. ರೈತರ ಬೇಡಿಕೆಗಳ ಬಗ್ಗೆ ಉದಾಸೀನ ತೋರುವ ಪ್ರಶ್ನೆಯೇ ಇಲ್ಲ. ಆದರೆ, ರೈತರು ಸರಕಾರದ ಜೊತೆ ತಾರ್ಕಿಕ ಚರ್ಚೆ ಮಾಡಬೇಕು. 2 ವರ್ಷ ಕಾನೂನು ಜಾರಿಗೊಳಿಸೋಣ. ತೊಂದರೆ ಕಂಡುಬಂದರೆ, ಅದನ್ನು ಪರಿಷ್ಕೃತಗೊಳಿಸೋಣ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

Join Whatsapp