Home ಟಾಪ್ ಸುದ್ದಿಗಳು ರೈತರ ಪ್ರತಿಭಟನೆ | ಡಿಕೆಶಿ, ಸಿದ್ದರಾಮಯ್ಯ, ಪರಮೇಶ್ವರ್ ಪೊಲೀಸ್ ವಶಕ್ಕೆ; ಪ್ರತಿಭಟನಕಾರರಿಗೆ ತಡೆ

ರೈತರ ಪ್ರತಿಭಟನೆ | ಡಿಕೆಶಿ, ಸಿದ್ದರಾಮಯ್ಯ, ಪರಮೇಶ್ವರ್ ಪೊಲೀಸ್ ವಶಕ್ಕೆ; ಪ್ರತಿಭಟನಕಾರರಿಗೆ ತಡೆ

ಬೆಂಗಳೂರು : ಕೇಂದ್ರ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ, ನಗರದಲ್ಲಿ ‘ರಾಜಭವನ ಚಲೋ’ ಹಮ್ಮಿಕೊಂಡಿರುವ ಕಾಂಗ್ರೆಸ್ ನಾಯಕರುಗಳಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಜಿ. ಪರಮೇಶ್ವರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಮಹಾರಾಣಿ ಕಾಲೇಜು ಬಳಿ ರೈತ ಪರ ಪ್ರತಿಭಟನಕಾರರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈಗಾಗಲೇ ಹಲವಾರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕಾಂಗ್ರೆಸ್ ನಾಯಕರು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶ ನಡೆಸಿ, ರಾಜಭವನದತ್ತ ಮೆರವಣಿಗೆ ಹೊರಟಿದ್ದರು. ನಾಯಕರನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರನ್ನು ಬಿಎಂಟಿಸಿ ಬಸ್ ಗಳಲ್ಲಿ ಕರೆದೊಯ್ದಿದ್ದಾರೆ.

Join Whatsapp
Exit mobile version