Home ಟಾಪ್ ಸುದ್ದಿಗಳು ರೈತ ಹೋರಾಟಕ್ಕೆ ಹೆಗಲು ಕೊಟ್ಟು ನಿಂತಿದೆ ಖಾಲ್ಸಾ ಏಡ್‌ ಸೇವಾ ಸಂಸ್ಥೆ

ರೈತ ಹೋರಾಟಕ್ಕೆ ಹೆಗಲು ಕೊಟ್ಟು ನಿಂತಿದೆ ಖಾಲ್ಸಾ ಏಡ್‌ ಸೇವಾ ಸಂಸ್ಥೆ

ದೆಹಲಿ : ಕಳೆದ ಎರಡು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಲ್ಲಿಯೂ ರೈತರು ಒಂದಿಷ್ಟು ಕದಲದೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಕೊರೆಯುವ ಚಳಿ ಮತ್ತು ಮಳೆಯಿಂದಾಗಿ ಪ್ರತಿಭಟನಾ ನಿರತ ರೈತರಿಗೆ ವಿವಿಧ ರೀತಿಯ ಸಮಸ್ಯೆಗಳು ಎದುರಾಗುತ್ತಿದ್ದು, ಖಾಲ್ಸಾ ಏಡ್‌ ಸಂಸ್ಥೆ ಎಲ್ಲ ರೀತಿಯ ನೆರವು ನೀಡುವ ಮೂಲಕ ಹೋರಾಟಕ್ಕೆ ಬಲ ತುಂಬಿದೆ.

ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಈ ಸಂಸ್ಥೆಯು 2 ಮಾಲ್‌ ಗಳನ್ನು ನಿರ್ಮಿಸಿದ್ದು, ದೈನಂದಿನ ಬಳಕೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಉಚಿತವಾಗಿ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ದೆಹಲಿಯಲ್ಲಿ ರೈತರ ಹೋರಾಟ ಶುರುವಿನಿಂದ ಇಂದಿನವರೆಗೂ ಊಟ, ಬಟ್ಟೆ, ಆಶ್ರಯ, ಆರೋಗ್ಯ ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯಲ್ಲಿ ಹೋರಾಟವನ್ನು ಪೂರೈಸುತ್ತಿದೆ. ಖಾಲ್ಸಾದ ಸೇವಾ ಚಟುವಟಿಕೆಗಳಿಗೆ ಭಾರೀ ಬೆಂಬಲ ಲಭ್ಯವಾಗಿದೆ.

ಖಾಲ್ಸಾ ಏಡ್ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿದ್ದು, 1999ರಲ್ಲಿ ರವೀಂದರ್ ಸಿಂಗ್ ಎಂಬುವವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ರಾಷ್ಟ್ರೀಯ ವಿಪತ್ತು ಸಂದರ್ಭಗಳಲ್ಲಿ ಪರಿಹಾರ ಕಾರ್ಯಗಳನ್ನು ನಡೆಸುತ್ತಾ ಬಂದಿದೆ.

ಮಯನ್ಮಾರ್, ಯಮೆನ್, ಗ್ರೀಸ್, ಗಲ್ಫ್ ರಾಷ್ಟ್ರಗಳು ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಸೇವಾ ಕಾರ್ಯಗಳನ್ನು ನಡೆಸಿದೆ. ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿದ್ದ ರೊಹಿಂಗ್ಯಾ ನಿರಾಶ್ರಿತರ ಪರವಾಗಿ ಕೆಲಸ ಮಾಡಿದೆ.

2018ರ ಕೇರಳ ಪ್ರವಾಹ ಸಂದರ್ಭದಲ್ಲಿ ಈ ಸಂಸ್ಥೆಯು ಪ್ರತಿದಿನ 15 ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು ಒದಗಿಸಿತ್ತು.

ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ

Join Whatsapp
Exit mobile version