ವಿವಾದಿತ ಕೃಷಿ ಕಾನೂನು ಹಿಂಪಡೆಯದಿದ್ದಲ್ಲಿ ಭಗತ್ ಸಿಂಗ್ ಸಂಬಂಧಿಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

Prasthutha|

ಚಂಡೀಗಢ : ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿವಾದಿತ ಕೃಷಿ ಕಾನೂನು ಹಿಂಪಡೆಯುವವರೆಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಸಂಬಂಧಿ ಅಭಯ್ ಸಂಧು ಎಚ್ಚರಿಕೆ ನೀಡಿದ್ದಾರೆ.

- Advertisement -

1906ರಲ್ಲಿ ಬ್ರಿಟಿಷರು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸಿ ರೈತರು ಪಗಡಿ ಸಂಭಾಲ್ ಜಟ್ಟಾ ಆಂದೋಲವನ್ನು ಕಟ್ಟಿದ್ದರು. ಈಗ ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಮತ್ತೆ ಶತಮಾನದ ಹಿಂದಿನ ಆಂದೋಲನವಾದ ಪಗಡಿ ಸಂಭಾಲ್ ಜಟ್ಟಾವನ್ನು ಸ್ಮರಿಸಿ ಅದಕ್ಕೆ ಚಾಲನೆ ನೀಡಿದ್ದಾರೆ.

ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಆಯೋಜನೆಗೊಂಡಿದ್ದ ಈ ಪ್ರತಿಭಟನೆಯಲ್ಲಿ ಸಂಧು ಕೂಡ ಭಾಗಿಯಾಗಿದ್ದಾರೆ.

- Advertisement -

ಮಾ.23ರಂದು ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ಭಾರತದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ದಿನವಾಗಿದೆ. ಈ ದಿನದ ವರೆಗೆ ಅಭಯ್ ಸಂಧು ಕೇಂದ್ರಕ್ಕೆ ಗಡುವು ನೀಡಿದ್ದು, ಒಂದು ವೇಳೆ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಸಂಧು ಹೇಳಿದ್ದಾರೆ.

Join Whatsapp