Home ಟಾಪ್ ಸುದ್ದಿಗಳು ದೆಹಲಿಯಲ್ಲಿ ಅನ್ನದಾತರ ಪ್ರತಿಭಟನಾ ಕಹಳೆ: ಉದ್ವಿಗ್ನ ವಾತಾವರಣ

ದೆಹಲಿಯಲ್ಲಿ ಅನ್ನದಾತರ ಪ್ರತಿಭಟನಾ ಕಹಳೆ: ಉದ್ವಿಗ್ನ ವಾತಾವರಣ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅನ್ನದಾತರ ಪ್ರತಿಭಟನಾ ಕಹಳೆ ಮೊಳಗಿದೆ. ಬೆಂಬಲ ಬೆಲೆ, ವಿವಿಧ ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿ ಅನ್ನದಾತರು ಫೀಲ್ಡ್​ಗಿಳಿದಿದ್ದಾರೆ. ರೈತರು ದೆಹಲಿಗೆ ಟ್ರ್ಯಾಕ್ಟರ್​ ಮೂಲಕ ಪ್ರವೇಶಿಸುವುದನ್ನು ಕಂಡು, ಹರಿಯಾಣದ ಅಂಬಾಲದಲ್ಲಿರುವ ಶಂಭುಗಡಿಯಲ್ಲಿ ರೈತರನ್ನು ತಡೆಯಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಇದರಿಂದ ದೆಹಲಿ, ಹರಿಯಾಣ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾವಿರಾರು ರೈತರ ಹಸಿರು ಸೇನೆ ಲಗ್ಗೆ ಇಡುತ್ತಿದೆ. ಪಂಜಾಬ್, ಹರಿಯಾಣ, ಕರ್ನಾಟಕ, ಕೇರಳದಿಂದ ರೈತರ ದಂಡು ದೆಹಲಿಯ ಗಡಿಭಾಗವನ್ನು ತಲುಪಿದೆ. ರಸ್ತೆಯುದ್ದಕ್ಕೆ ಸಾಲು, ಸಾಲು ಟ್ರ್ಯಾಕ್ಟರ್‌ಗಳು ದೆಹಲಿಯತ್ತ ಧಾವಿಸುತ್ತಾ ಇದ್ದಾರೆ. ಪೊಲೀಸರು ರೈತರನ್ನು ತಡೆಯಲು ಮುಳ್ಳಿನ ಕೋಟೆಯನ್ನೇ ನಿರ್ಮಿಸಿದ್ದಾರೆ.

ಸಾವಿರಾರು ರೈತರು ಜಮಾಯಿಸುತ್ತಾ ಇರೋದ್ರಿಂದ ದೆಹಲಿ-ನೋಯ್ಡಾ ಗಡಿಯ ಡಿಎನ್‌ಡಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿದೆ.

Join Whatsapp
Exit mobile version