Home ಟಾಪ್ ಸುದ್ದಿಗಳು ಕೇಂದ್ರದ ಕೃಷಿ ನೀತಿ ವಿರೋಧಿಸಿ ರೈತರಿಂದ ‘ದೆಹಲಿ ಚಲೋ’ | ಅಶ್ರುವಾಯು, ಜಲಪ್ರಹಾರ ಪ್ರಯೋಗ

ಕೇಂದ್ರದ ಕೃಷಿ ನೀತಿ ವಿರೋಧಿಸಿ ರೈತರಿಂದ ‘ದೆಹಲಿ ಚಲೋ’ | ಅಶ್ರುವಾಯು, ಜಲಪ್ರಹಾರ ಪ್ರಯೋಗ

ನವದೆಹಲಿ : ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನೂತನ ಕೃಷಿ ಕಾನೂನು ವಿರೋಧಿಸಿ, ‘ದೆಹಲಿ ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿರುವ ಸಾವಿರಾರು ರೈತರು ಹರ್ಯಾಣದಿಂದ ದೆಹಲಿಗೆ ಪ್ರಯಾಣಿಸಲು ಸಿದ್ಧವಾಗಿದ್ದು, ಈ ವೇಳೆ ಅವರನ್ನು ತಡೆಯುವ ಉದ್ದೇಶದಿಂದ ಸ್ಥಳೀಯ ಪೊಲೀಸರು ಬಲಪ್ರಯೋಗಿಸಿದ್ದಾರೆ.

ದೆಹಲಿಗೆ ಪಾದಯಾತ್ರೆ ಮತ್ತು ಟ್ರಾಕ್ಟರ್ ಗಳ ಮೂಲಕ ತೆರಳಲು ಸಿದ್ಧತೆ ನಡೆಸುತ್ತಿದ್ದ ಸಾವಿರಾರು ರೈತರ ಮೇಲೆ ಬಿಜೆಪಿ ಆಡಳಿತದ ಹರ್ಯಾಣ ಪೊಲೀಸರು ಗಡಿಪ್ರದೇಶದಲ್ಲಿ ಅಶ್ರುವಾಯು ಸಿಡಿಸಿದ್ದಾರೆ ಮತ್ತು ಜಲಪ್ರಹಾರ ನಡೆಸಿದ್ದಾರೆ.

ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಕೇರಳ, ಪಂಜಾಬ್ ನ ರೈತರು ಎರಡು ದಿನಗಳ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಾದಯಾತ್ರೆ ಅಥವಾ ವಾಹನಗಳ ಮೂಲಕ ದೆಹಲಿ ತಲುಪಲು ನಿರ್ಧರಿಸಿದ್ದಾರೆ.

ದೆಹಲಿ ಗಡಿ ಪ್ರದೇಶಗಳಾದ ಗುರುಗ್ರಾಮ್ ಮತ್ತು ಫರೀದಾಬಾದ್ ಅನ್ನು ಮುಚ್ಚಲಾಗಿದ್ದು, ಮೆಟ್ರೋ ಮೇಲೆ ಪರಿಣಾಮ ಬೀರಿದೆ. ಕೊರೊನ ಸೋಂಕಿನ ನೆಪದಲ್ಲಿ ದೆಹಲಿಯಲ್ಲಿ ಯಾವುದೇ ಪ್ರತಿಭಟನೆ ನಡೆಸಲು ಅನುಮತಿ ನೀಡಿಲ್ಲ.    

Join Whatsapp
Exit mobile version