Home ಟಾಪ್ ಸುದ್ದಿಗಳು ರಾವಣನ ಬದಲು ಮೋದಿ ಪ್ರತಿಕೃತಿ ದಹಿಸಿ ದಸರಾ ಆಚರಿಸಿದ ರೈತರು!

ರಾವಣನ ಬದಲು ಮೋದಿ ಪ್ರತಿಕೃತಿ ದಹಿಸಿ ದಸರಾ ಆಚರಿಸಿದ ರೈತರು!

ಹೊಸದಿಲ್ಲಿ: ರೈತರು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಿ ದಸರಾ ಆಚರಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.


ಟ್ವಿಟರ್‌ನಲ್ಲಿ ‘ಆಜ್ ಕಾ ರಾವಣ್ ನರೇಂದ್ರ ಮೋದಿ’ (ಇಂದಿನ ರಾವಣ ನರೇಂದ್ರ ಮೋದಿ) ಹ್ಯಾಶ್‌ಟ್ಯಾಗ್ ಬಳಸಿ ಸಾವಿರಾರು ಮಂದಿ ರೈತರನ್ನು ಬೆಂಬಲಿಸಿದ್ದಾರೆ.

“ಒಬ್ಬ ವ್ಯಕ್ತಿಯ ಅಹಂಕಾರದಿಂದ 630 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಆದರೆ ಮೋದಿಯವರೇ ನೆನಪಿಡಿ, ರಾವಣನ ಅಹಂಕಾರವು ರಾಮನಿಂದ ನಾಶವಾಯಿತು. ಪ್ರಸ್ತುತ ನಮ್ಮ ರೈತರು ನಿಮಗೆ ರಾಮನಾಗಿದ್ದಾರೆ” ಎಂದು ‘ಟಿಕ್ರಿ ಅಪ್‌ಡೇಟ್ಸ್’ ಎಂಬ ಹೆಸರಿನ ಟ್ವಿಟ್ಟರ್ ಖಾತೆ ಟ್ವೀಟ್ ಮಾಡಿದೆ.

https://twitter.com/TikriUpdates/status/1448830960720564224?ref_src=twsrc%5Etfw%7Ctwcamp%5Etweetembed%7Ctwterm%5E1448830960720564224%7Ctwgr%5E%7Ctwcon%5Es1_&ref_url=https%3A%2F%2Fnaanugauri.com%2Fdussehra-2021-farmers-protest-narendra-modi-ravan-tikri-border-haryana%2F


ಹರಿಯಾಣದ ಅಂಬಾಲದಲ್ಲಿ ಮೋದಿ ಪ್ರತಿಕೃತಿ ದಹಿಸಿದ ರೈತರು ವಿವಾದಿತ ಕಾನೂನುಗಳ ಪ್ರತಿಗಳನ್ನು ಸುಟ್ಟು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಮತ್ತು ಕಾರ್ಪೊರೇಟ್ ಗಳ ಪ್ರತಿಕೃತಿಗಳನ್ನು ದಹಿಸಿದ್ದಾರೆ.
ಕಳೆದ ವರ್ಷವೂ ರೈತರು ರಾವಣ ಪ್ರತಿಕೃತಿಯನ್ನು ದಹಿಸಿ, ವಿವಾದಿತ ಕೃಷಿ ಕಾನೂನುಗಳ ಪ್ರತಿಯನ್ನು ಸುಟ್ಟು ಹಾಕಿದ್ದರು.

https://twitter.com/TikriUpdates/status/1448889386603536385?ref_src=twsrc%5Etfw%7Ctwcamp%5Etweetembed%7Ctwterm%5E1448889386603536385%7Ctwgr%5E%7Ctwcon%5Es1_&ref_url=https%3A%2F%2Fnaanugauri.com%2Fdussehra-2021-farmers-protest-narendra-modi-ravan-tikri-border-haryana%2F
Join Whatsapp
Exit mobile version