Home ಟಾಪ್ ಸುದ್ದಿಗಳು ರೈತರ ಹೋರಾಟಕ್ಕೆ ವರ್ಷ: ರೈತರ ತ್ಯಾಗ, ಸರ್ಕಾರದ ಕ್ರೂರ ನಡೆಯನ್ನು ನೆನಪಿಸಿದ ಪ್ರಿಯಾಂಕಾ ಗಾಂಧಿ

ರೈತರ ಹೋರಾಟಕ್ಕೆ ವರ್ಷ: ರೈತರ ತ್ಯಾಗ, ಸರ್ಕಾರದ ಕ್ರೂರ ನಡೆಯನ್ನು ನೆನಪಿಸಿದ ಪ್ರಿಯಾಂಕಾ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಆಂದೋಲನವು ಒಂದು ವರ್ಷವನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಮೋದಿ ಸರ್ಕಾರ ಅನ್ನದಾತರ ವಿರುದ್ಧದ ಕಿರುಕುಳ, ರೈತರ ಅಚಲ ಆಂದೋಲನ, ಹುತಾತ್ಮತೆ, ನಿರ್ದಯ ಸರ್ಕಾರದ ದುರಂಹಕಾರವನ್ನು ನೆನೆಪಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಸರ್ಕಾರದ ಈ ರೀತಿಯ ನಡೆ ಖಂಡನೀಯ ಎಂದು ತಿಳಿಸಿದರು.

ಈ ಕುರಿತು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದು, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರಲ್ಲದೆ ಪ್ರತಿಭಟನೆಯ ಮೂಲಕ ರೈತರು ಅನುಭವಿಸುತ್ತಿರುವ ಬವಣೆಯನ್ನು ಸರ್ಕಾರ ಕೇಳುತಿಲ್ಲ ಎಂದು ವಾಗ್ದಾಳಿ ನಡೆಸಿದರು. ಸದ್ಯ ರೈತರ ಹೋರಾಟ ಯಶಸ್ಸಿನ ಹಾದಿಯಲ್ಲಿದೆ ಮತ್ತು ಅವರ ಹೋರಾಟಕ್ಕೆ ನಾವೆಲ್ಲರೂ ತಲೆಬಾಗಬೇಕಾಗಿದೆ ಎಂದು ತಿಳಿಸಿದರು.

Join Whatsapp
Exit mobile version