Home ಟಾಪ್ ಸುದ್ದಿಗಳು ರೈತರ ಪ್ರತಿಭಟನೆ | ಬೇಡಿಕೆ ಈಡೇರುವ ವರೆಗೂ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ನೀಡದಂತೆ ಕರೆ

ರೈತರ ಪ್ರತಿಭಟನೆ | ಬೇಡಿಕೆ ಈಡೇರುವ ವರೆಗೂ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ನೀಡದಂತೆ ಕರೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಿರತರಾಗಿರುವ ರೈತರು ಈಗ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ತಮ್ಮ ಬೇಡಿಕೆ ಈಡೇರುವ ವರೆಗೂ ಹರ್ಯಾಣದಲ್ಲಿ ಟೋಲ್ ರಹಿತ ವಾಹನ ಪ್ರಯಾಣಕ್ಕೆ ರೈತರು ಕರೆ ನೀಡಿದ್ದಾರೆ.

ಆರಂಭದಲ್ಲಿ ಡಿ.25ರಿಂದ ಡಿ.27ರ ವರೆಗೆ ಹೆದ್ದಾರಿಯಲ್ಲಿ ರೈತರು ಟೋಲ್ ಶುಲ್ಕ ನೀಡದಂತೆ ಕರೆ ನೀಡಿದ್ದರು. ಇದೀಗ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಿರತರಾಗಿರುವ ರೈತರನ್ನು ಇನ್ನಷ್ಟು ದೊಡ್ಡ ಸಂಖ್ಯೆಯಲ್ಲಿ ರೈತರು ಧಾವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಅನಿರ್ದಿಷ್ಟಾವಧಿ ವರೆಗೆ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಸದಂತೆ ರೈತ ಮುಖಂಡರು ಕರೆ ನೀಡಿದ್ದಾರೆ.

Join Whatsapp
Exit mobile version