Home ಟಾಪ್ ಸುದ್ದಿಗಳು ರೈತನ ಮೇಲೆ ಹೊಡೆಯುತ್ತಿರುವ ಭದ್ರತಾ ಸಿಬ್ಬಂದಿ | ಈ ಫೋಟೊ ತೆಗೆದ ಫೋಟೊಗ್ರಾಫರ್ ಮೇಲೆ ಹಲ್ಲೆ

ರೈತನ ಮೇಲೆ ಹೊಡೆಯುತ್ತಿರುವ ಭದ್ರತಾ ಸಿಬ್ಬಂದಿ | ಈ ಫೋಟೊ ತೆಗೆದ ಫೋಟೊಗ್ರಾಫರ್ ಮೇಲೆ ಹಲ್ಲೆ

ನವದೆಹಲಿ : ರೈತರ ಪ್ರತಿಭಟನೆಯ ವೇಳೆ ಪೊಲೀಸರು ವಯೋವೃದ್ಧ ರೈತರೊಬ್ಬರ ಮೇಲೆ ಲಾಠಿ ಬೀಸುತ್ತಿರುವ ಫೋಟೊವೊಂದು ವೈರಲ್ ಆಗಿತ್ತು. ಬಹುತೇಕ ನೀವೂ ಆ ಫೋಟೊ ನೋಡಿದ್ದಿರಬಹುದು. ಆದರೆ, ಈಗ ಆ ಫೋಟೊ ತೆಗೆದ ಫೋಟೊ ಪತ್ರಕರ್ತನ ಮೇಲೆ ದುಷ್ಕರ್ಮಿಗಳ ಗುಂಪೊಂದರಿಂದ ದಾಳಿ ನಡೆದಿದೆ.

ದೆಹಲಿ ನಿವಾಸಿ ಫೋಟೊ ಪತ್ರಕರ್ತ ರವಿ ಚೌಧರಿ, ತಮ್ಮ ಮೇಲಾದ ದಾಳಿಯ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಾನು ಬೈಕ್ ನಲ್ಲಿ ಹೋಗುತ್ತಿದ್ದಾಗ ಬೊಲೆರೊ ವಾಹನದಲ್ಲಿ ಬಂದ 5-6 ದುಷ್ಕರ್ಮಿಗಳು ನನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ರವಿ ಹೇಳಿಕೊಂಡಿದ್ದಾರೆ.

ಈ ಘಟನೆ ಕುರಿತು ಮುರಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ, ಎಫ್ ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ರವಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಿಟಿಐ ಫೋಟೊ ಜರ್ನಲಿಸ್ಟ್ ಆಗಿರುವ ರವಿ ಚೌಧರಿಯವರ ಫೋಟೊ ದೇಶಾದ್ಯಂತ ವೈರಲ್ ಆಗಿದ್ದು, ಬಿಜೆಪಿ ಸರಕಾರದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು.  

https://twitter.com/choudharyview/status/1335931367629094913
Join Whatsapp
Exit mobile version