ಕೃಷಿ ಕಾನೂನುಗಳ ಪ್ರತಿಗಳನ್ನು ಸುಡುವ ಮೂಲಕ ರೈತರ ‘ಹೋಲಿಕಾ ದಹನ್’ ಆಚರಣೆ

Prasthutha|

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾನೂನುಗಳನ್ನು ಸುಟ್ಟು ರೈತರು ‘ಹೋಲಿಕಾ ದಹನ್’ ಆಚರಿಸಿದ್ದಾರೆ. ದೆಹಲಿ ಗಡಿಯಲ್ಲಿ ತಂಗಿದ್ದ ರೈತರು ಕೃಷಿ ಕಾನೂನುಗಳನ್ನು ಸುಡುವ ಈ ವಿಶೇಷ ಆಚರಣೆಯನ್ನು ಆಯೋಜಿಸಿದ್ದಾರೆ.

- Advertisement -

 ಸಾಮಾನ್ಯವಾಗಿ ಕಟ್ಟಿಗೆ ಮತ್ತು ಸಗಣಿಯನ್ನು ಸುಟ್ಟು ‘ಹೋಲಿಕಾ ದಹನ್’ ಆಚರಿಸಲಾಗುತ್ತದೆ. ಆದರೆ ಈ ಕಾರ್ಯಕ್ರಮದಲ್ಲಿ ರೈತರು ಸಗಣಿ ಬದಲಿಗೆ ಕಟ್ಟಿಗೆಗಳೊಂದಿಗೆ ಕೃಷಿ ಕಾನೂನುಗಳ ಪ್ರತಿಗಳನ್ನು ಸುಡುವ ಮೂಲಕ ಆಚರಿಸಿದ್ದಾರೆ. ‘ಹೋಲಿಕಾ ದಹನ್’ ಹೋಳಿಯ ಮೊದಲ ದಿನ ಆಚರಿಸಲಾಗುತ್ತದೆ. ರೈತರು ಈ ವಿಶೇಷ ಆಚರಣೆಯನ್ನು  ಮನೆಯಲ್ಲಿ ಆಚರಿಸದೆ ಪ್ರತಿಭಟನಾ ಸ್ಥಳವಾದ ದೆಹಲಿಯ ಗಡಿಯಲ್ಲಿ ಕೃಷಿ ಕಾನೂನುಗಳ ಪ್ರತಿಗಳನ್ನು ಸುಡುವ ಮೂಲಕ ಆಚರಿಸಿದ್ದಾರೆ. 

ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳದೆ, ಬೆಳೆಗಳಿಗೆ ಮೂಲ ಬೆಂಬಲ ಬೆಲೆಗಳನ್ನು ವಿಧಿಸದೆ ಈ ಆಂದೋಲನದಿಂದ ಹಿಂದೆ ಸರಿಯುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಈ ವೇಳೆ ಪುನರುಚ್ಚರಿಸಿದೆ.

Join Whatsapp